ಬಳ್ಳಾರಿಯ ರಾಘವ ಕಲಾಮಂದಿರದಲ್ಲಿ ಆಯೋಜಿಸಿದ್ದ ವಿಶ್ವ ಗೋ ಗೌರವ ದಿನಾಚರಣೆ ಕಾರ್ಯಕ್ರಮದಲ್ಲಿ ಭಾರತಾಂಬೆ ಭಾವಚಿತ್ರಕ್ಕ ಮಾರ್ಲಾಪಣೆ ಮಾಡಲಾಯಿತು. ಗೋ ಶಾಲಾ ಜಿಲ್ಲಾಧ್ಯಕ್ಷ ವಿನಯ್ ಬಾಯಿ ಜೀ, ಶ್ರೇಷ್ಠ ಇಂಟರ್ ನ್ಯಾಷನಲ್ ಸ್ಕೂಲ್ ಸ್ಥಾಪಕ ಬ್ರಹ್ಮಯ್ಯನಾಯ್ಡು, ಜಿಲ್ಲಾ ಶೃಂಗೇರಿ ಶಾರದಾ ಮಠದ ಧರ್ಮದರ್ಶಿ ಬಿ.ಕೆ.ಎನ್. ಮೂರ್ತಿ , ರಾಜಸ್ಥಾನಿ ಸಮಾಜದ ಪ್ರಮುಖ ಸೂರಜ್ ಮಾಲ್ ಜೀ, ವಕೀಲ ಕಣೇಕಲ್ ಎರ‌್ರಿಸ್ವಾಮಿ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಗೋವು
ಬಳ್ಳಾರಿ : ತಾಯಿ ಒಂದೆರಡು ವರ್ಷ ಮಗುವಿಗೆ ಹಾಲು ಕೊಟ್ಟು ಸಲಹಿದರೆ, ಗೋವು ಜೀವನ ಪರ್ಯಂತ ಹಾಲು ನೀಡಿ ಜಗತ್ತನ್ನೇ ಪೋಷಿಸುತ್ತಾಳೆ. ಹೀಗಾಗಿ ಅವಳು ವಿಶ್ವದ ತಾಯಿ ಎಂದು ಗೋ ಸಮ್ಮಾನ ಅಭಿಯಾನ ಸಮಿತಿ ಸಂಚಾಲಕ ಗುರುರಾಜ್ ಸಸಿಹಿತ್ಲು ಹೇಳಿದರು.
ನಗರದ ರಾಘವ ಕಲಾಮಂದಿರದಲ್ಲಿ ಗೋ ಸಮ್ಮಾನ ಅಭಿಯಾನ ಸಮಿತಿಯಿಂದ ಆಯೋಜಿಸಿದ್ದ ವಿಶ್ವ ಗೋ ಗೌರವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಸಾವಯವ ಗೊಬ್ಬರಯಿಲ್ಲದೆ ಕೃಷಿ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತಿದೆ. ಹಳ್ಳಿಯ ಜನತೆ, ಗೋವು ಆಧಾರಿತ ಆರ್ಥಿಕ ಚಟುವಟಿಕೆಗಳಿಲ್ಲದೆ ಪಟ್ಟಣಗಳತ್ತ ವಲಸೆ ಹೋಗುತ್ತಿದ್ದಾರೆ. ಇವೆಲ್ಲವನ್ನೂ ತಡೆಯಬೇಕಾದರೆ ಮತ್ತೆ ಗೋವುಗಳು ಹೆಚ್ಚಾಗಿ ಸಾಕಣಿಕೆ ಮಾಡಬೇಕು. ಈ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಬೇಕು ಎಂದರು.
ಜಿಲ್ಲೆಯಲ್ಲಿ ಗೋ ಹತ್ಯೆ ನಿಷೇಧ ಬೆಂಬಲಿಸಿ 26,500 ಸಹಿ ಸಂಗ್ರಹವಾಗಿದೆ. ಇದನ್ನು ಜಿಲ್ಲಾಧಿಕಾರಿಗಳ ಮೂಲಕ ಸಿಎಂ, ರಾಜ್ಯಪಾಲ, ಪ್ರಧಾನಮಂತ್ರಿ ಹಾಗೂ ರಾಷ್ಟ್ರಪತಿಗಳಿಗೆ ಕಳುಹಿಸಲಾಗುವುದು. ನಿಗದಿತ ವೇಳೆಗೆ ಸರ್ಕಾರದಿಂದ ಸಕರಾತ್ಮಕ ಸ್ಪಂದನೆ ಸಿಗದಿದ್ದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.