ಕಂಪ್ಲಿಯಲ್ಲಿ ನ್ಯಾಯಾಲಯ ಆರಂಭಕ್ಕೆ ದಿನಗಣನೆ

ಕಂಪ್ಲಿಯಲ್ಲಿ ಆರಂಭವಾಗಲಿರುವ ನ್ಯಾಯಾಲಯದ ಒಳನೋಟ.
ಕಂಪ್ಲಿಯಲ್ಲಿ ಆರಂಭವಾಗಲಿರುವ ನ್ಯಾಯಾಲಯದ ಒಳನೋಟ.
Published on
ಕಂಪ್ಲಿ: ಪಟ್ಟಣದ ಮಾರುತಿನಗರ ಉದ್ಯಾನದಲ್ಲಿರುವ ಪುರಸಭೆ ಅಧೀನದ ಕಟ್ಟಡದಲ್ಲಿ ಸಿವಿಲ್ ಜೆಎಂಎಫ್‌ಸಿ ನ್ಯಾಯಾಲಯ ಏ.25ರಂದು ಆರಂಭಗೊಳ್ಳಲಿದೆ. ಈ ಮೂಲಕ ತಾಲೂಕು ವಕೀಲರ ಬಳಗದ ಮೂರು ವರ್ಷಗಳ ಹೋರಾಟಕ್ಕೆ ಫಲ ಸಿಕ್ಕಿದ್ದು, ನ್ಯಾಯಾಲಯದ ಕೆಲಸಗಳಿಗಾಗಿ ಬಳ್ಳಾರಿಗೆ ತೆರಳಬೇಕಿದ್ದ ಕಕ್ಷಿದಾರರಲ್ಲೂ ನೆಮ್ಮದಿ ಮೂಡಲಿದೆ.
ನ್ಯಾಯಾಲಯ ಕಟ್ಟಡ ಸಿದ್ಧತೆಗಾಗಿ ಸಂಕೀರ್ಣ ಕಟ್ಟಡ ನಿರ್ಮಾಣ ಕಾಮಗಾರಿ ಲೆಕ್ಕ ಶೀರ್ಷಿಕೆಯಲ್ಲಿ 25 ಲಕ್ಷ ರೂ. ಅನುದಾನ ಮಂಜೂರಾಗಿ 2026ರ ಫೆ.26ರಿಂದ ನವೀಕರಣ ಕಾಮಗಾರಿ ಆರಂಭಗೊಂಡಿತ್ತು. ಇದೀಗ ಕಟ್ಟಡಕ್ಕೆ ಬಣ್ಣ, ನ್ಯಾಯಾಧೀಶರ ಪೀಠ, ಸಾಕ್ಷಿ ಕಟ್ಟೆ, ವಕೀಲರ ಆಸನ, ಕಕ್ಷಿದಾರರ ಆಸನ, ಕಟಕಟೆ ಸಿದ್ಧಪಡಿಸಲಾಗಿದೆ.
ನ್ಯಾಯಾಧೀಶರ ಕೊಠಡಿ, ನ್ಯಾಯಾಲಯ ಅಧಿಕಾರಿಗಳ ಕಚೇರಿ, ನ್ಯಾಯಾಲಯದ ಕೊಠಡಿಗಳಿಗೆ ಮತ್ತು ಹೊರಭಾಗದಲ್ಲಿ ನ್ಯಾಯಾಲಯದ ಹೆಸರು ಬರೆಸುವ ಮತ್ತು ನ್ಯಾಯಾಲಯದ ಮುಂಭಾಗವನ್ನು ಸ್ವಚ್ಛಗೊಳಿಸುವ ಕಾರ್ಯ ಬಾಕಿ ಇದೆ.
ಏ.15ರಂದು ಜಿಲ್ಲಾ ಹೆಚ್ಚುವರಿ ನ್ಯಾಯಾಧೀಶರು ಭೇಟಿ ನೀಡಿ ನ್ಯಾಯಾಲಯ ಕಟ್ಟಡ, ವ್ಯವಸ್ಥೆಗಳನ್ನು ಪರಿಶೀಲಿಸಲಿದ್ದಾರೆ ಎಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ ಜಿ.ಪ್ರಕಾಶ್, ಕಾರ್ಯದರ್ಶಿ ಅಯ್ಯೋದಿ ಹರೀಶ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net