ಸಾವಿರಾರು ಎಕರೆ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ಈಗಾಗಲೇ ಬಿತ್ತನೆ ಮಾಡಿರುವ ಹತ್ತಿ ಬೆಳೆ ನೆಲ ಬಿಟ್ಟು ಮೇಲೇಳದ ಸ್ಥಿತಿಯಲ್ಲಿದೆ. ರೈತರು ಮಳೆಗಾಗಿ ಕಾದು ಕುಳಿತುಕೊಂಡಿದ್ದಾರೆ. ಮಳೆಯಿಲ್ಲದ ಕಾರಣ ರೈತ ಕುಟುಂಬಗಳು ಕೂಲಿ ಕೆಲಸಕ್ಕಾಗಿ ಗುಳೆ ಹೋಗುವ ಪರಿಸ್ಥಿತಿ ಎದುರಾಗಿದೆ. ಒಂದು ವರ್ಷಕ್ಕೆ ಎರಡರಿಂದ ಮೂರು ಬೆಳೆ ಬೆಳೆಯುವ ರೈತರಿಗೆ ಇದು ಆಘಾತಕಾರಿ ಸನ್ನಿವೇಶ ಎದುರಾಗಿದೆ. ಕೃಷಿ ಕೂಲಿ ಕಾರ್ಮಿಕರಿಗೂ ಉದ್ಯೋಗ ಇಲ್ಲದಂತಾಗಿದೆ.