ಪಾಲಿಕೆ ಸದಸ್ಯ ಕುಬೇರನನ್ನು ಬಂಧಿಸಿ

ಪ್ರಭುಶೇಖರ ಗೌಡ
ಪ್ರಭುಶೇಖರ ಗೌಡ
Published on

ಪ್ರಮುಖ ಮುಖ್ಯಾಂಶಗಳು

  • ಬಂಧಿಸಿ
ಬಳ್ಳಾರಿ : ಮಹಾನಗರ ಪಾಲಿಕೆಯ ಇಂಜನಿಯರ್ ಜಿ. ಇ. ವೀರೇಶ್ ಅವರ ಮೇಲೆ, 38ನೇ ವಾಡ್ ಸದಸ್ಯ ಕುಬೇರ ಅವರು ಹಲ್ಲೆ ನಡೆಸಿದ್ದು ಖಂಡನೀಯ, ಕೂಡಲೇ ಬಂಧಿಸಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಕಾರ್ಯಕಾರಿಯ ನಿರ್ದೇಶಕ ಆರ್. ಪ್ರಭು ಶೇಖರಗೌಡ ಪ್ರಕರಣೆಯಲ್ಲಿ ಒತ್ತಾಯಿಸಿದ್ದಾರೆ.
ಹಾಗೆ ವೀರಶೈವ ಲಿಂಗಾಯತ ಸಮಾಜ ಯಾವುದೇ ಇಲಾಖೆಯ ಅಧಿಕಾರಿಗಳು ಸಹ ಇಂತಹ ಘಟನೆಗಳನ್ನು ನಡೆದ ಸಂದರ್ಭದಲ್ಲಿ ನಾವು ಅವರೊಂದಿಗೆ ಇದ್ದೇವೆ ಎಂಬುದು ಮರೆಯಬಾರದು. ಹಾಗೆ ಆತ್ಮಸ್ಥೈರ್ಯ ಕಳೆದುಕೊಳ್ಳದೆ ಪ್ರಾಮಾಣಿಕ ಮತ್ತು ಭ್ರಷ್ಟಾಚಾರ ದ ವಿರುದ್ಧ ನಿಮ್ಮ ಸೇವೆ ಸಲ್ಲಿಸಿ ಸಾರ್ವಜನಿಕರಿಗೆ ಕರ್ತವ್ಯ ನಿರ್ವಹಿಸಲು ಪಾತ್ರರಾಗಿ ಎಂದು ಮನವಿ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net