ಸರ್ಕಾರಿ ಶಾಲೆ ಉಳಿವಿಗೆ ಸಹಕಾರ ಅಗತ್ಯ

ಕನ್ನನಾಯಕನಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ  ಶಾಲೆಯ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಎಸ್ಡಿಎಂಸಿ ಅಧ್ಯಕ್ಷೆ ಜಿ.ಶ್ರುತಿ ಉದ್ಘಾಟಿಸಿದರು. ಶಿಕ್ಷಕ ಕೆ.ವೀರಭದ್ರಪ್ಪ, ಬಿಆರ್‌ಪಿ ರವೀಂದ್ರ, ಸಿಆರ್‌ಪಿ ರವಿಕುಮಾರ್, ಮುಖ್ಯಶಿಕ್ಷಕ ಮೂಗಪ್ಪ, ಶಿಕ್ಷಕರಾದ ಹೇಮಪ್ಪ, ಶಿವಪುತ್ರಪ್ಪ ಇತರರಿದ್ದರು.
ಕನ್ನನಾಯಕನಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಎಸ್ಡಿಎಂಸಿ ಅಧ್ಯಕ್ಷೆ ಜಿ.ಶ್ರುತಿ ಉದ್ಘಾಟಿಸಿದರು. ಶಿಕ್ಷಕ ಕೆ.ವೀರಭದ್ರಪ್ಪ, ಬಿಆರ್‌ಪಿ ರವೀಂದ್ರ, ಸಿಆರ್‌ಪಿ ರವಿಕುಮಾರ್, ಮುಖ್ಯಶಿಕ್ಷಕ ಮೂಗಪ್ಪ, ಶಿಕ್ಷಕರಾದ ಹೇಮಪ್ಪ, ಶಿವಪುತ್ರಪ್ಪ ಇತರರಿದ್ದರು.
Published on
ಕೊಟ್ಟೂರು: ಗ್ರಾಮಸ್ಥರ ಸಹಕಾರ ಮತ್ತು ಶಿಕ್ಷಕರ ಪರಿಶ್ರಮದಿಂದ 11 ವಿವಿಧ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಈ ಪ್ರಾಥಮಿಕ ಶಾಲೆಯು ರಾಜ್ಯದಲ್ಲೇ ಮಾದರಿ ಶಾಲೆಯಾಗಿ ಗುರುತಿಸಿಕೊಂಡಿದೆ ಎಂದು ನಿಂಬಳಗೇರಿ ಸರ್ಕಾರಿ ಪ್ರೌಢ ಶಾಲೆ ಕನ್ನಡ ಭಾಷಾ ಶಿಕ್ಷಕ ಕೆ.ವೀರಭದ್ರಪ್ಪ ಹೇಳಿದರು.
ತಾಲೂಕಿನ ಕನ್ನನಾಯಕನಕಟ್ಟೆ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಗ್ರಾಮಕ್ಕೆ ಒಂದು ಆಕರ್ಷಣೆ ಇದೆ. ಆ ಕಾರಣ ಈ ಶಾಲೆಗೆ ಮಲೆನಾಡಿನ ಗಾಂಧಿ ದಿ. ಎಚ್.ಜಿ.ಗೋವಿಂದಗೌಡರ ರಾಜ್ಯಮಟ್ಟದ ಪ್ರಶಸ್ತಿ ಕೂಡ ಲಭಿಸಿದೆ. ಇಲ್ಲಿನ ಉತ್ತಮ ಪರಿಸರವನ್ನು ತಿಳಿದ ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್ ಅವರ ಆಪ್ತ ಕಾರ್ಯದರ್ಶಿ ಅನಿರುದ್ಧ್ ಶ್ರವಣ್ 2013 ರಲ್ಲಿ ಯುಪಿಎಸ್‌ಸಿ ತೇರ್ಗಡೆಯಾದ ಸಂದರ್ಭದಲ್ಲಿ ಒಂದು ದಿನ ಇಲ್ಲಿಯೇ ಕಳೆದು ಈ ಶಾಲೆ ಬಗ್ಗೆ ಹಲವು ವೇದಿಕೆಗಳಲ್ಲಿ ಪ್ರಶಂಸಿಸಿದ್ದಾರೆ ಎಂದರು.
ಶಿಕ್ಷಕ ಬಿ.ಹೇಮಪ್ಪ ಮಾತನಾಡಿ, ರಾಜ್ಯದಲ್ಲಿಯೇ ಹೆಸರಾಗಿರುವ ಈ ಶಾಲೆಗೆ ಮೊದಲು 243 ವಿದ್ಯಾರ್ಥಿಗಳಿದ್ದರು. ಈ ಸಂಖ್ಯೆ ಇದೀಗ 53ಕ್ಕೆ ಇಳಿದಿದೆ. ಖಾಸಗಿ ಆಂಗ್ಲಮಾಧ್ಯಮ ಶಾಲೆಗಳಿಗೆ ಮೊರೆ ಹೋಗುತ್ತಿರುವ ಪಾಲಕರು ಸಹಕರಿಸಿದರೆ ಇಲ್ಲಿಯೂ ಕೆಪಿಎಸ್ ಆರಂಭಿಸಬಹುದು. ಸರ್ಕಾರಿ ಶಾಲೆಗೆ ಹೆಚ್ಚಿನ ಮನ್ನಣೆ ನೀಡಬೇಕೆಂದು ಕೋರಿದರು.
ಪ್ರಾ.ಶಾ.ಶಿ.ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪಿ.ನಾಗೇಶ ಮಾತನಾಡಿದರು. ಹಳೆ ವಿದ್ಯಾರ್ಥಿಗಳು ಅನುಭವ ಹಂಚಿಕೊಂಡರು.ಎಸ್ಡಿಎಂಸಿ ಅಧ್ಯಕ್ಷೆ ಜಿ.ಶ್ರುತಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕ ಮೂಗಪ್ಪ ಯು., ಎಸ್ಡಿಎಂಸಿ ಸದಸ್ಯರಾದ ಶಿವರಾಮ, ಅಮೃತಾ, ವಿರೂಪಾಕ್ಷಾಚಾರಿ ಹಾಗೂ ಕರಾಸನೌ ಸಂಘದ ಸಂಘಟನಾ ಕಾರ್ಯದರ್ಶಿ ಚನ್ನೇಶ್, ಜಂಟಿ ಕಾರ್ಯದರ್ಶಿ ಶಿವಕುಮಾರ್, ಕ.ರಾ.ಸ.ನೌಕರರ ಸಂಘದ ಉಪಾಧ್ಯಕ್ಷ ಜಿ.ಸಿದ್ದಪ್ಪ, ಸಿಆರ್‌ಪಿ ರವಿಕುಮಾರ್, ಬಿಆರ್‌ಪಿ ರವೀಂದ್ರ. ಜಿ,ಕೆ.ಅಯ್ಯನಹಳ್ಳಿ ಸಂಪನ್ಮೂಲ ವ್ಯಕ್ತಿ ದುರುಗಪ್ಪ ಎನ್., ಶಿಕ್ಷಕರಾದ ಬಸವರಾಜ್ ಎಚ್.ಎನ್., ಕೊಟ್ರಪ್ಪ ಟಿ. ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net