ಅಂಗವಿಕಲರ ಗೌರವಯುತ ಜೀವನಕ್ಕೆ ಸಹಕಾರಿ

ಸಿರಗುಪ್ಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಜನಮಂಗಲ ಕಾರ್ಯಕ್ರಮದಡಿ ಫಲಾನುಭವಿ ದುರುಗಮ್ಮಗೆ ಕ್ಷೇತ್ರ ಯೋಜನಾಧಿಕಾರಿ ಸುಧೀರ್ ಹಂಗಳೂರು ವಾಟರ್ ಬೆಡ್ ವಿತರಿಸಿದರು.
ಸಿರಗುಪ್ಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಜನಮಂಗಲ ಕಾರ್ಯಕ್ರಮದಡಿ ಫಲಾನುಭವಿ ದುರುಗಮ್ಮಗೆ ಕ್ಷೇತ್ರ ಯೋಜನಾಧಿಕಾರಿ ಸುಧೀರ್ ಹಂಗಳೂರು ವಾಟರ್ ಬೆಡ್ ವಿತರಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಗೌರವಯುತ ಜೀವನ

ಅಂಗವಿಕಲರ ಗೌರವಯುತ ಜೀವನಕ್ಕೆ ಸಹಕಾರಿ

ಸಿರಗುಪ್ಪ: ಶಾರೀರಿಕವಾಗಿ ಅಶಕ್ತರಾದ ಜನರಿಗೆ ನೆರವಾಗಲು ಮತ್ತು ಜೀವನಮಟ್ಟ ಸುಧಾರಿಸುವುದು ಜನಮಂಗಲ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ಕ್ಷೇತ್ರ ಯೋಜನಾಧಿಕಾರಿ ಸುಧೀರ್ ಹಂಗಳೂರು ಹೇಳಿದರು.
ಪಟ್ಟಣದ ಸದಾಶಿವನಗರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್ ವತಿಯಿಂದ ಜನಮಂಗಲ ಕಾರ್ಯಕ್ರಮದಡಿ ಅಶಕ್ತರು/ಅಂಗವಿಕಲರಿಗೆ ಮಂಜೂರಾದ ವಾಟರ್ ಬೆಡ್‌ಗಳನ್ನು ಗುರುವಾರ ವಿತರಿಸಿ ಮಾತನಾಡಿದರು.
ಜನಮಂಗಲ ಕಾರ್ಯಕ್ರಮದಡಿ ವ್ಹೀಲ್ ಚೇರ್, ಕಮೋಡ್ ಚೇರ್, ಯು ಸೇಫ್ ವಾಕರ್, ತ್ರೀ ಲೆಗ್ ಸ್ಟಿಕ್, ಸಿಂಗಲ್ ಲೆಗ್ ಸ್ಟಿಕ್, ವಾಟರ್ ಬೆಡ್ ವಿತರಿಸಲಾಗುತ್ತಿದೆ. ತಾಲೂಕಿನಲ್ಲಿ ಈವರೆಗೆ 38 ಲಕ್ಷ ರೂ. ಮೌಲ್ಯದ ಸಲಕರಣೆಗಳನ್ನು ವಿತರಿಸಲಾಗಿದೆ.
ಅಂಗವಿಕಲರು ಗೌರವಯುತ ಜೀವನ ನಡೆಸಲು ಸಹಕಾರಿಯಾಗಿದೆ ಎಂದರು. ವಲಯ ಮೇಲ್ವಿಚಾರಕಿ ರೇಣುಕಾ, ಜ್ಞಾನವಿಕಾಸ ಸಮನ್ವಯಾಧಿಕಾರಿ ಪ್ರಿಯಾ, ಸೇವಾ ಪ್ರತಿನಿಧಿ ಅನಿತಾ, ಯೂನುಸ್, ಸಂಘದ ಸದಸ್ಯರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net