ಮನೆಯ ಒಳಗಿನ ಸ್ವಚ್ಛತೆಗೆ ನೀಡುವಷ್ಟೇ ಹೊರಗಿನ ಸ್ವಚ್ಛತೆಗೂ ನೀಡಬೇಕು. ನೀರು ತುಂಬುವ ಪರಿಕರಗಳನ್ನು ವಾರಕ್ಕೊಮ್ಮೆ ತೊಳೆದು, ಒಣಗಿಸಿ ನಂತರ ನೀರು ತುಂಬಿ ಸರಿಯಾಗಿ ಮುಚ್ಚಳ ಮುಚ್ಚಬೇಕು. ಮನೆಯ ಹೊರಗೆ ಅನಗತ್ಯವಾಗಿ ಮಳೆ ನೀರು ನಿಲ್ಲುವ ಬೀಸಾಡಿದ ಟೈರ್, ತಗಡಿನ ಟಿನ್, ಪ್ಲಾಸ್ಟಿಕ್ ಕಪ್, ಹೂವಿನ ಕುಂಡ ಹಾಗೂ ಫ್ರಿಡ್ಜ್ ಹಿಂಭಾಗದಲ್ಲಿ ಏಳು ದಿನಗಳಿಗಿಂತ ಹೆಚ್ಚು ಕಾಲ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಇದರಿಂದ ಡೆಂೆ ಮತ್ತು ಚಿಕೂನ್‌ಗುನ್ಯಾ ಹರಡುವ ಈಡೀಸ್ ಈಜಿಪ್ಟ್ ಸೊಳ್ಳೆಗಳ ಮರಿ ಉತ್ಪತ್ತಿ ತಡೆಯಬಹುದು ಎಂದರು.