ಮುಂದುವರಿದ ಕಾರ್ಯಾಚರಣೆ

ಮುಂದುವರಿದ ಕಾರ್ಯಾಚರಣೆ
ಮುಂದುವರಿದ ಕಾರ್ಯಾಚರಣೆ
Published on

ಪ್ರಮುಖ ಮುಖ್ಯಾಂಶಗಳು

  • ಕಾರ್ಯಾಚರಣೆ
ಬಳ್ಳಾರಿ : ಇಲ್ಲಿನ ಗರೀಬ್ ನವಾಜ್ ಕಾಲನಿ, ಬಿಮ್ಸ್ , ಸಿರಗುಪ್ಪ ತಾಲೂಕಿನ ಬಾಗೇವಾಡಿ, ತಾಲೂಕಿನ ಜಾಲಬೆಂಚಿ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಜೂಜಾ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿ 19 ಆರೋಪಿಗಳನ್ನು ಬಂಧಿಸಿ 2.36 ಲಕ್ಷ ರೂ. ಹಣ ವಶಪಡಿಸಿಕೊಂಡಿದ್ದಾರೆ.
ಕಂಪ್ಲಿ ತಾಲೂಕಿನ ಸುಗ್ಗೇನಹಳ್ಳಿ ಗ್ರಾಮ ಹಾಗೂ ಸಿರಗುಪ್ಪ ತಾಲೂಕಿನ ಬಾಗೇವಾಡಿ ಕ್ಯಾಂಪ್‌ನಲ್ಲಿ ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ 4200 ರೂ. ಮೌಲ್ಯದ 7.56 ಲೀ. ಮದ್ಯ ವಶಪಡಿಸಿಕೊಂಡು ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.
ತಾಲೂಕಿನ ಶಂಕರಬಂಡೆ ಗ್ರಾಮದಿಂದ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಮರಳಿನ ವಾಹನದ ಮೇಲೆ ದಾಳಿ ನಡೆಸಿ ಎರಡು ಸಾವಿರ ರೂ. ಮೌಲ್ಯದ ಎರಡು ಟನ್ ಮರಳು, ಒಂದು ಟಾಟಾ ಎಸಿ ವಾಹನ ಹಾಗೂ ಒಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಆಯಾ ಸಂಬಂಧಪಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆಯಿಂದ ಪ್ರಕಟಣೆಯಲ್ಲಿ ತಿಳಿಸಿದೆ.
==
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net