ಬಾಕ್ಸ್ : ಈಗಾಗಲೇ ಬಿಮ್ಸ್ ವ್ಯಾಪ್ತಿಯಲ್ಲಿ ಅಪಘಾತಗಳು ಸಂಭವಿಸಿದ ವೇಳೆ ಚಿಕಿತ್ಸೆಗಾಗಿ ಟ್ರಾಮ್ ಕೇರ್ ಸೆಂಟರ್, 200 ಕೋಟಿ ರೂ. ವೆಚ್ಚದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೊರ ರೋಗಿಗಳಿಗೆ ಚಿಕಿತ್ಸೆ ಆರಂಭಗೊಂಡಿದೆ. ಜತೆಗೆ 372 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕ್ಯಾನ್ಸರ್ ಆಸ್ಪತ್ರೆ, ಅವಧಿ ಮುನ್ನ ಜನಿಸುವ ಶಿಶುಗಳಿಗೆ ತಾಯಿ ಹಾಲು ದೊರಕಿಸಿಕೊಡುವ ಉದ್ದೇಶದಿಂದ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯಲ್ಲೇ ಹ್ಯೂಮನ್ ಮಿಲ್ಕ್ ಬ್ಯಾಂಕ್ ಘಟಕ ಆರಂಭಿಸಿದೆ. ಇದಲ್ಲದೇ, ಬಿಮ್ಸ್ ಸಂಸ್ಥೆಯಲ್ಲಿ ಕಳೆದ ಸಾಲಿನಿಂದ ಬ್ಯಾಚುಲರ್ ಆಫ್ ಫಿಜಿಯೋಥೆರಪಿ(ಬಿಪಿಟಿ) ಕೋರ್ಸ್ ಕೂಡ ಆರಂಭಿಸಿದೆ. ಇನ್ನೂ ಜಿಂದಾಲ್ ಸಂಸ್ಥೆಯಿಂದ ತಾಯಿ ಹಾಗೂ ಮಕ್ಕಳ ಆಸ್ಪತ್ರೆ ಕಟ್ಟಡಕ್ಕೆ ಚಾಲನೆ ದೊರೆತಿದೆ. ಒಟ್ಟಾರೆ, ರಾಜ್ಯದ ನಾಲ್ಕು ಜಿಲ್ಲೆಗಳಿಗೆ ಸೇರಿದಂತೆ ನೆರೆಯ ಆಂಧ್ರದ ಕೆಲ ಜಿಲ್ಲೆಗಳಿಗೆ ಆರೋಗ್ಯ ಸಂಜೀವಿನಿಯಾಗಿರುವ ಬಳ್ಳಾರಿ ಬಿಮ್ಸ್‌ನಲ್ಲಿ ಸೂಕ್ತ ಸೌಲಭ್ಯಗಳ ಜತೆಗೆ ಪ್ರಾಧ್ಯಾಪಕರ ನೇಮಕ, ವೈದ್ಯರ ಹಾಗೂ ಸಿಬ್ಬಂದಿಯನ್ನು ಕಾಲ ಕಾಲಕ್ಕೆ ನೇಮಿಸಿಕೊಳ್ಳಲು ಸರ್ಕಾರ ಅನುವು ಮಾಡಿಕೊಟ್ಟರೆ ಸ್ಥಳೀಯ ಖಾಸಗಿ ಆಸ್ಪತ್ರೆಗಳಿಗೆ ಪೈಪೋಟಿ ನೀಡಲಿದೆ.