ದೇಶೀಯ ಗೋವುಗಳ ತಳಿ ಸಂರಕ್ಷಣೆ ತುರ್ತು ಅಗತ್ಯ

ಕಂಪ್ಲಿಯಲ್ಲಿ ಕಲ್ಯಾಣಚೌಕಿಮಠ ಕಾಮಧೇನು ಗೋಶಾಲಾ ಸೇವಾ ಟ್ರಸ್ಟ್ ಹಮ್ಮಿಕೊಂಡಿದ್ದ ಧರ್ಮಜಾಗೃತಿ ಕಾರ್ಯಕ್ರಮವನ್ನು ಹೆಬ್ಬಾಳ ನಾಗಭೂಷಣ ಶಿವಾಚಾರ್ಯರು ಉದ್ಘಾಟಿಸಿದರು. ವಿಶ್ವಾರಾಧ್ಯ ಶಿವಾಚಾರ್ಯರು, ಅಭಿನವ ಸಿದ್ಧಲಿಂಗ ಶಿವಾಚಾರ್ಯರು, ಸುಳೇಕಲ್ ಬೃಹನ್ಮಠದ ಪದ್ಮಕ್ಷಯ್ಯ, ಎಂ.ಎಸ್.ಶಶಿಧರಶಾಸ್ತ್ರಿ, ಕೆ.ಎಂ.ಚನ್ನಮಲ್ಲಯ್ಯಶಾಸ್ತ್ರಿ, ಗೊಗ್ಗ ಚನ್ನಬಸವರಾಜ ಇತರರಿದ್ದರು.
ಕಂಪ್ಲಿಯಲ್ಲಿ ಕಲ್ಯಾಣಚೌಕಿಮಠ ಕಾಮಧೇನು ಗೋಶಾಲಾ ಸೇವಾ ಟ್ರಸ್ಟ್ ಹಮ್ಮಿಕೊಂಡಿದ್ದ ಧರ್ಮಜಾಗೃತಿ ಕಾರ್ಯಕ್ರಮವನ್ನು ಹೆಬ್ಬಾಳ ನಾಗಭೂಷಣ ಶಿವಾಚಾರ್ಯರು ಉದ್ಘಾಟಿಸಿದರು. ವಿಶ್ವಾರಾಧ್ಯ ಶಿವಾಚಾರ್ಯರು, ಅಭಿನವ ಸಿದ್ಧಲಿಂಗ ಶಿವಾಚಾರ್ಯರು, ಸುಳೇಕಲ್ ಬೃಹನ್ಮಠದ ಪದ್ಮಕ್ಷಯ್ಯ, ಎಂ.ಎಸ್.ಶಶಿಧರಶಾಸ್ತ್ರಿ, ಕೆ.ಎಂ.ಚನ್ನಮಲ್ಲಯ್ಯಶಾಸ್ತ್ರಿ, ಗೊಗ್ಗ ಚನ್ನಬಸವರಾಜ ಇತರರಿದ್ದರು.
Published on
ಕಂಪ್ಲಿ: ಗೋವು ರಾಷ್ಟ್ರೀಯ ಸಂಪತ್ತು. ದೇಶೀಯ ಗೋತಳಿಗಳ ಸಂರಕ್ಷಣೆ ತುರ್ತು ಅಗತ್ಯವಾಗಿದೆ ಎಂದು ಬುಕ್ಕಸಾಗರ ಕರಿಸಿದ್ದೇಶ್ವರಮಠದ ವಿಶ್ವಾರಾಧ್ಯ ಶಿವಾಚಾರ್ಯರು ಹೇಳಿದರು.
ನಗರದ ದೇವಸಮುದ್ರ ಕ್ರಾಸ್‌ನಲ್ಲಿ ಶ್ರೀ ಕಲ್ಯಾಣಚೌಕಿಮಠ ಕಾಮಧೇನು ಗೋಶಾಲಾ ಸೇವಾ ಟ್ರಸ್ಟ್‌ನಿಂದ ಗೋಶಾಲೆ, ಕಲ್ಯಾಣ ಕೃಷಿ ಆಶ್ರಮ, ಗುರುಕುಲ ಶಿಕ್ಷಣ ಉದ್ಘಾಟನೆ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ಧರ್ಮಜಾಗೃತಿ ಸಭೆಯಲ್ಲಿ ಮಾತನಾಡಿದರು.
ಕಂಪ್ಲಿ ಭಾಗದಲ್ಲಿ ಗೋಶಾಲೆ ಅಗತ್ಯವಿದ್ದು, ಕಲ್ಯಾಣಚೌಕಿಮಠ ಗೋಶಾಲೆ ಆರಂಭಿಸಿರುವುದು ಸ್ವಾಗತಾರ್ಹ ಎಂದರು. ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರು ಮಾತನಾಡಿ, ಕೃಷಿಕರು ಕೃಷಿಯೊಡನೆ ಆಕಳು, ಕುರಿ, ಕೋಳಿ ಸಾಕಬೇಕು. ಆಕಳು ಸಾಕಣೆಯಿಂದ ಹೈನು ಉತ್ಪಾದಿಸುವುದರಿಂದ ವಿಷಮುಕ್ತ ಆಹಾರ ಸೇವನೆಯಿಂದ ಮುಕ್ತರಾಗಬಹುದು ಎಂದು ತಿಳಿಸಿದರು.
ಇದಕ್ಕು ಮುನ್ನ ಲೋಕಕಲ್ಯಾಣಾರ್ಥ ಇಷ್ಟಾರ್ಥಸಿದ್ಧಿಯಾಗ ನಡೆಯಿತು. ಕಂಪ್ಲಿ, ರಾಮಸಾಗರ, ಸಣಾಪುರ ಆಯುರ್ವೇದ ಆಸ್ಪತ್ರೆಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು. ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಪಶು ಇಲಾಖೆಗಳ ಮಾಹಿತಿ ಪ್ರದರ್ಶನ, ಸ್ವಸಹಾಯ ಸಂಘಗಳ ಸಾವಯವ ಉತ್ಪನ್ನ ಮಾರಾಟ ಮಾಳಿಗೆಗಳಿದ್ದವು.
ಕಲ್ಯಾಣಚೌಕಿ ಮಠದ ಬಸವರಾಜಶಾಸ್ತ್ರಿ, ಹರಗಿನ ದೋಣಿಯ ಅಭಿನವ ಸಿದ್ಧಲಿಂಗ ಶಿವಾಚಾರ್ಯರು, ಸುಳೇಕಲ್ ಬೃಹನ್ಮಠದ ಪದ್ಮಕ್ಷಯ್ಯ, ಸಾಂಗತ್ರಯ ಸಂಸ್ಕೃತ ಪಾಠಶಾಲೆ ನಿವೃತ್ತ ಪ್ರಾಚಾರ್ಯ ಎಂ.ಎಸ್.ಶಶಿಧರಶಾಸ್ತ್ರಿ, ಕೆ.ಎಂ.ಚನ್ನಮಲ್ಲಯ್ಯಶಾಸ್ತ್ರಿ, ಸಂತೆಕೂಡೂರಿನ ಚಂದ್ರಶೇಖರ ಶಿವಾಚಾರ್ಯರು, ಜಂಗಮರ ಹೊಸಳ್ಳಿಯ ಅಜಾತಶಂಭುಲಿಂಗ ಶಿವಾಚಾರ್ಯರು, ಪಾಲ್ತೂರಿನ ಚನ್ನವೀರ ಶಿವಾಚಾರ್ಯರು, ಸಿರಗುಪ್ಪದ ಬಸವಭೂಷಣಸ್ವಾಮಿ, ಕಾರಟಗಿ ಹಿರೇಮಠದ ಮರುಳಸಿದ್ಧಯ್ಯಸ್ವಾಮಿ, ಪ್ರಮುಖರಾದ ಶಂಭುಲಿಂಗಸ್ವಾಮಿ, ಗೊಗ್ಗ ಚನ್ನಬಸವರಾಜ, ಅರವಿ ಬಸವನಗೌಡ, ವಾಲಿ ಕೊಟ್ರಪ್ಪ, ಉಗಮರಾಜ ಜೈನ್, ಕಳಕನಗೌಡ್ರು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net