ಆತ್ಮಸಾಕ್ಷಿಯೇ ನಿಜವಾದ ಕಾನೂನು

ದೇಶದಲ್ಲಿ ಎಷ್ಟೇ ಕಠಿಣ ಕಾನೂನುಗಳಿದ್ದರೂ ಮನುಷ್ಯನ ಆತ್ಮಸಾಕ್ಷಿಯೇ ಎಲ್ಲಕ್ಕಿಂತ ಮಿಗಿಲಾದ ಕಾನೂನು ಎಂದು ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ದೇವರೆಡ್ಡಿ ಹೇಳಿದರು.
Legal Awareness Program
ಬಳ್ಳಾರಿಯ ಸಂತ ಜಾನರ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ವಿಶೇಷ ಕಾನೂನು ಅರಿವು ಕಾರ್ಯಕ್ರಮವನ್ನು ನ್ಯಾಯಾಧೀಶ ದೇವರೆಡ್ಡಿ ಉದ್ಘಾಟಿಸಿದರು. ನ್ಯಾ.ರಾಜೇಶ್ ಎನ್.ಹೊಸಮನೆ, ಡಿವೈಎಸ್ಪಿ ಗೋವಿಂದ್ ರಾಜು, ವಕೀಲೆ ಮಂಜುಳಾ, ಬಿಇಒ ಸಿದ್ದಲಿಂಗ ಮೂರ್ತಿ, ಪ್ರಾಚಾರ್ಯ ಸಣ್ಣ ಶಿವರಾಮ್ ಇದ್ದರು.
Published on: 

ವಿಜಯವಾಣಿ ಸುದ್ದಿಜಾಲ ಬಳ್ಳಾರಿ

ದೇಶದಲ್ಲಿ ಎಷ್ಟೇ ಕಠಿಣ ಕಾನೂನುಗಳಿದ್ದರೂ ಮನುಷ್ಯನ ಆತ್ಮಸಾಕ್ಷಿಯೇ ಎಲ್ಲಕ್ಕಿಂತ ಮಿಗಿಲಾದ ಕಾನೂನು ಎಂದು ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ದೇವರೆಡ್ಡಿ ಹೇಳಿದರು.

ಸಂತ ಜಾನರ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ, ರಾಜ್ಯ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಪೊಲೀಸ್, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಹಯೋಗದಲ್ಲಿ ಸುರಕ್ಷಿತ ಬಚಪನ್ ಅಭಿಯಾನ ಅಂಗವಾಗಿ ಗುರುವಾರ ಆಯೋಜಿಸಿದ್ದ ಪೋಕ್ಸೋ ಕಾಯ್ದೆ-2012 ಕುರಿತ ವಿಶೇಷ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಆತ್ಮಸಾಕ್ಷಿಗೆ ಅನುಗುಣವಾಗಿ, ಸಮಾಜಕ್ಕೆ ಹಾನಿಯಾಗದಂತೆ ಬದುಕಿದರೆ ಯಾವುದೇ ಕಠಿಣ ಕಾನೂನುಗಳ ಅಗತ್ಯವೇ ಇರುವುದಿಲ್ಲ. ಆದರೆ ವಿಕೃತ ಮನಸ್ಸುಗಳಿಂದಾಗಿ ಮಕ್ಕಳ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿರುವ ಕಾರಣ ಇಂತಹ ಕಾಯ್ದೆಗಳು ಮತ್ತು ಜಾಗೃತಿ ಕಾರ್ಯಕ್ರಮಗಳ ಅವಶ್ಯಕತೆ ಎದುರಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್.ಹೊಸಮನೆ ಮಾತನಾಡಿ, ಕಾನೂನಿನ ದೃಷ್ಟಿಯಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪ್ರತಿಯೊಬ್ಬರೂ ಮಕ್ಕಳೇ. ಮಕ್ಕಳ ಸುರಕ್ಷತೆಗಾಗಿ ಪೋಕ್ಸೋದಂತಹ ಕಠಿಣ ಕಾನೂನುಗಳು ಜಾರಿಯಲ್ಲಿವೆ. ಆದರೆ ಕಾನೂನಿನಿಂದ ಮಾತ್ರ ರಕ್ಷಣೆ ಸಾಧ್ಯವಿಲ್ಲ. ಪ್ರತಿಯೊಬ್ಬ ಮಗುವಿನ ಸುರಕ್ಷತೆ ಮೊದಲು ಮನೆ ಮತ್ತು ಶಾಲೆಯಿಂದಲೇ ಆರಂಭವಾಗಬೇಕು ಎಂದರು.

ಕಾನೂನು ಸೇವೆಗಳ ಪ್ರಾಧಿಕಾರದ ವಕೀಲೆ ಮಂಜುಳಾ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಪೋಕ್ಸೋ ಕಾಯ್ದೆ ಹಾಗೂ ಮಕ್ಕಳ ರಕ್ಷಣಾ ಕಾನೂನುಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಬಳಿಕ ಸಂಸ್ಥೆಯ ತರಗತಿ ಕೊಠಡಿಗಳಿಗೆ ಗಣ್ಯರು ಹಾಗೂ ಅಧಿಕಾರಿಗಳು ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.