ಮಹಿಳಾ ಮೀಸಲಾತಿಯನ್ನು ಡಿಲಿಮಿಟೇಷನ್ ಜತೆ ಜೋಡಿಸುವುದು ಏಕೆ ?. ನೇರವಾಗಿಯೇ ಮಹಿಳಾ ಮೀಸಲಾತಿ ಜಾರಿಗೆ ಕಾಂಗ್ರೆಸ್‌ನಿಂದ ಯಾವುದೇ ಅಭ್ಯಂತರವಿಲ್ಲ. ಡಿಲಿಮಿಟೇಷನ್ ಜತೆ ಮಹಿಳಾ ಮೀಸಲಾತಿಯನ್ನು ಜೋಡಿಸಿ ತಮ್ಮ ರಾಜಕೀಯ ಲಾಭ ಪಡೆಯಲು ಬಿಜೆಪಿ ಪ್ರಯತ್ನಿಸುತ್ತಿದೆ. ಇದು ಅತ್ಯಂತ ಕೀಳುಮಟ್ಟದ ರಾಜಕಾರಣವಾಗಿದೆ. ಕಾಂಗ್ರೆಸ್ ಕೇವಲ ಡಿಲಿಮಿಟೇಷನ್‌ಗೆ ಮಾತ್ರ ವಿರೋಧ. ಮಹಿಳಾ ಮೀಸಲಾತಿಗೆ ಸಂಪೂರ್ಣ ಬೆಂಬಲವಿದೆ. ಬಿಜೆಪಿಯೂ ಮಹಿಳಾ ಮೀಸಲಾತಿ ಮತ್ತು ಡಿಲಿಮಿಟೇಷನ್ ಒಟ್ಟಿಗೆ ತರಲು ಯತ್ನಿಸಿದ್ದರಿಂದ ಬಿಲ್ ವಿಫಲವಾಯಿತು ಎಂದು ಸ್ಪಷ್ಟಪಡಿಸಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್, ಮಹಿಳಾ ಮುಖಂಡರಾದ ನಾಗಮಣಿ ಜಿಂಗಲ್, ಎಂ.ಎಸ್.ಮಂಜುಳ, ಆಶಾಲತಾ, ಕಮಲ ಮರಿಸ್ವಾಮಿ, ಪದ್ಮ ಇತರರಿದ್ದರು.