ಶಾಸಕ ನಾರಾ ಭರತರೆಡ್ಡಿ ದೇಶದ ಪ್ರಧಾನಿ ಎಂಬಂತೆ ನಾಲ್ವರ ಗನ್‌ಮ್ಯಾನ್‌ಗಳ ಇಟ್ಟುಕೊಂಡು ಗೊಂಡಾ ರಾಜಕಾರಣ ಮಾಡುತ್ತಿದ್ದಾರೆ. ಈ ಹಿಂದೆ ನೆರೆಯ ಆಂಧ್ರ ರಾಜ್ಯ ವೈಲೆಂಟ್ ಎನ್ನುತ್ತಿದ್ದರು. ಈಗ ಆಂಧ್ರ ಶಾಂತಿಯಾಗಿದ್ದು, ರಾಜ್ಯದಲ್ಲಿ ವೈಲೆಂಟ್ ಶುರುವಾಗಿದೆ. ಡ್ರಗ್ಸ್ ,ದರೋಡೆ ಇದರ ನಡುವೆ ಕಾಂಗ್ರೆಸ್ ಶಾಸಕರ ಗನ್‌ಮ್ಯಾನ್‌ಗಳಿಂದ ದಾಳಿ ನಡೆಯುತ್ತಿದ್ದು, ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ.