ಸಂಡೂರು ತಾಲೂಕಿನ ಯಶವಂತ ನಗರದಲ್ಲಿ 18.64 ಲಕ್ಷ ರೂ. ವೆಚ್ಚದ ಕಾಮಗಾರಿಗೆ 2020-21ನೇ ಸಾಲಿನಲ್ಲಿ ಕರೆದಿದ್ದ ಟೆಂಡರ್‌ನಲ್ಲಿ ಗುತ್ತಿಗೆದಾರ ಮೌಲಾಲಿ ಭಾಗವಹಿಸಿದ್ದರು. ಅಂದಿನ ಕಾರ್ಯಪಾಲಕ ಇಂಜನಿಯರ್ ಆರ್.ಪ್ರಭು, ಲೆಕ್ಕಾಧೀಕ್ಷಕ ಎಂ.ಮಾಲತೇಶ್, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಎಸ್.ಶ್ರೀಕಂಠ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎಂ.ಸುರೇಂದ್ರನಾಥ ಅವರು ನಕಲಿ ವರ್ಕ್ ಡನ್ ಪ್ರಮಾಣ ಪತ್ರ ಹಾಗೂ ನಕಲಿ ರಹಸ್ಯ ವರದಿಗಳನ್ನು ಮೌಲಾಲಿಗೆ ಒದಗಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಗ್ರಾಮೀಣ ಕುಡಿವ ನೀರು ಇಲಾಖೆಯ ಇಇ ಎಚ್.ಇಂದೂಧರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.