ಇಲ್ಲಿನ ಜನತಾ ಹೋಟೆಲ್, ದಾವಣಗೆರೆ ಬೆಣ್ಣೆ ದೋಸೆ ಸೇರಿದಂತೆ ಹಲವು ಕಡೆಗಳಲ್ಲಿ ಅಡುಗೆ ತಯಾರಿಸಲು ಗ್ಯಾಸ್ ಬದಲಾಗಿ ಭತ್ತದ ತೌಡು ಹಾಗೂ ಹೊಟ್ಟು ಬಳಸಲಾಗುತ್ತಿದೆ. ಆದರೆ, ಇದು ತಾತ್ಕಾಲಿಕ ಪರಿಹಾರವೇ ಹೊರತು ಸುಸ್ಥಿರವಲ್ಲ ಎಂಬಂತೆಯಾಗಿದೆ. ಗ್ಯಾಸ್ ಒಲೆಗಳ ವೇಗಕ್ಕೆ ಹೊಂದಿಕೊಂಡಿರುವ ಅಡುಗೆ ಸಿಬ್ಬಂದಿಗೆ ಗ್ಯಾಸ್ ನಿಂದ ಕೆಲಸ ಮಾಡುವುದು ಸವಾಲಾಗಿದೆ. ಟೀ, ಕಾಫಿ, ಪೂರಿ ಹಾಗೂ ದೋಸೆಯಂತಹ ತಿಂಡಿಗಳನ್ನು ಸೌದೆ ಒಲೆಯ ಮೇಲೆ ಸಿದ್ಧಪಡಿಸುವುದು ಅಸಾಧ್ಯವಾಗಿದೆ. ಈಗಾಗಲೇ ಹಲವು ಹೋಟೆಲ್‌ಗಳಲ್ಲಿ ಪೂರಿ ತಯಾರಿಸುವುದನ್ನು ನಿಲ್ಲಿಸಲಾಗಿದೆ. ಅನಿಲ ಪೂರೈಕೆ ಹೀಗೆಯೇ ಮುಂದುವರೆದರೆ ಕಾಫಿ-ಟೀ ಕೂಡ ಬಂದ್ ಮಾಡಬೇಕಾದ ಅನಿವಾರ್ಯತೆ ಎದುರಾಗಲಿದೆ.