ಅಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸಕ್ಕೆ ತೊಡಗಿದರೂ ಸ್ವಾತಂತ್ರ್ಯ ಚಳವಳಿಗೆ ಇಳಿದುಬಿಟ್ಟರು. ಶ್ಯಾಮ್ಜಿವರ್ಮ, ವೀರ ಸಾವರ್ಕರ್ ಅವರ ಪ್ರಭಾವ ಧಿಂಗ್ರಾರನ್ನು ಸೆಳೆದುಬಿಟ್ಟಿತು. ಜತೆ ಜತೆಯಾಗಿಯೇ ಸ್ವಾತಂತ್ರ್ಯ ಕಾರ್ಯಗಳಲ್ಲಿ ತೊಡಗಿದ್ದರು. ಆದರೆ ಬ್ರಿಟಿಷ್ ಸರ್ಕಾರದ ಕಿರುಕಳ ತಾಳದೆ ಶ್ಯಾಮ್ಜಿವರ್ಮ ಪ್ಯಾರಿಸ್‌ಗೆ ವಲಸೆ ಹೋಗಬೇಕಾಯಿತು. ಇತ್ತ ವೀರಸಾವರ್ಕರ್‌ರಿಂದ ಪ್ರೋತ್ಸಾಹಿತರಾದ ಧಿಂಗ್ರಾ, ಇಂಗ್ಲೆಂಡಿನಲ್ಲಿ ಭಾರತೀಯರನ್ನು ಗುಪ್ತಚರರಾಗಿ ಬಳಸುವುದರಲ್ಲಿ ನಿಷ್ಠಾವಂತನಾಗಿದ್ದರು. ಸರ್.ವಿಲಿಯಮ್ ಹಟ್ಸ್ ಕರ್ಜನ್ ವೈಲಿ ಎಂಬ ಅಧಿಕಾರಿಯನ್ನು ಗುಂಡಿಕ್ಕಿ ಕೊಂದರು. ಒಂದೂವರೆ ತಿಂಗಳುಗಳ ಕಾಲ ವಿಚಾರಣೆ ನಡೆದು 1909ರ ಆ.17ರಂದು 26ರ ಹರೆಯದ ಧಿಂಗ್ರಾ ಅವರನ್ನು ಗಲ್ಲಿಗೇರಿಸಲಾಯಿತು ಎಂದು ವಿವರಿಸಿದರು.