ಕೃಷಿಯೊಂದಿಗೆ ಹೈನುಗಾರಿಕೆ ಮಾಡಿ

ರಾಮಚಂದ್ರಾಪುರ ಕ್ಯಾಂಪ್‌ನಲ್ಲಿ ಮಿಶ್ರ ತಳಿ ಹಸುಗಳ ಹಾಲು ಕರೆಯುವ ಸ್ಪರ್ಧೆ ಕಾರ್ಯಕ್ರಮಕ್ಕೆ ಮೆಟ್ರಿ ಪಶು ವೈದ್ಯಾಧಿಕಾರಿ ಪ್ರದೀಪ್ ಕುಮಾರ್ ಚಾಲನೆ ನೀಡಿದರು.
ರಾಮಚಂದ್ರಾಪುರ ಕ್ಯಾಂಪ್‌ನಲ್ಲಿ ಮಿಶ್ರ ತಳಿ ಹಸುಗಳ ಹಾಲು ಕರೆಯುವ ಸ್ಪರ್ಧೆ ಕಾರ್ಯಕ್ರಮಕ್ಕೆ ಮೆಟ್ರಿ ಪಶು ವೈದ್ಯಾಧಿಕಾರಿ ಪ್ರದೀಪ್ ಕುಮಾರ್ ಚಾಲನೆ ನೀಡಿದರು.
Published on
ಕಂಪ್ಲಿ: ರೈತ ಮಹಿಳೆಯರು ಆರ್ಥಿಕ ಸ್ವಾವಲಂಬನೆ ಸಾಧಿಸುವಲ್ಲಿ ಹಸು ಸಾಕಾಣಿಕೆ ಪ್ರಮುಖ ಪಾತ್ರವಹಿಸುತ್ತಿದೆ ಎಂದು ಪಟ್ಟಣದ ಪಶು ಆಸ್ಪತ್ರೆ ಮುಖ್ಯ ಪಶು ವೈದ್ಯಾಧಿಕಾರಿ ಕೆ.ಯು.ಬಸವರಾಜ ಹೇಳಿದರು.

ರಾಮಚಂದ್ರಪುರ ಕ್ಯಾಂಪ್‌ನಲ್ಲಿ ಜಿಪಂ ಅನುದಾನದಡಿ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯಿಂದ ಆಯೋಜಿಸಿದ್ದ ಮಿಶ್ರ ತಳಿ ಹಸುಗಳ ಅಧಿಕ ಹಾಲು ಕರೆಯುವ ಸ್ಪರ್ಧಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಗುರುವಾರ ಮಾತನಾಡಿದರು. ರೈತರು ಕೃಷಿಯೊಂದಿಗೆ ಹೈನುಗಾರಿಕೆ ಮಾಡಬೇಕು. ಮಿಶ್ರ ತಳಿ ಹಸುಗಳ ಹಾಲು ಉತ್ಪಾದನೆಯಲ್ಲಿ ಆರೋಗ್ಯಕರ ಪೈಪೋಟಿಗಾಗಿ ಈ ಕಾರ್ಯಕ್ರಮ ಆಯೋಜಿಸಿದ್ದು, ಹೆಚ್ಚು ಹಾಲು ಕರೆಯುವ ಮಿಶ್ರ ತಳಿ ಹಸುಗಳ ಸಾಕಾಣಿಕೆಯನ್ನು ಮಹಿಳೆಯರು ಮಾಡಬೇಕೆಂದು ಸಲಹೆ ನೀಡಿದರು.
ಸ್ಪರ್ಧೆಯಲ್ಲಿ 21ಮಹಿಳೆಯರು ಪಾಲ್ಗೊಂಡಿದ್ದರು. ಎಂ.ಪಾವನಿ ಜಗದೀಶ 10 ಲೀ.ಹಾಲು ಕರೆದು ಪ್ರಥಮ ಬಹುಮಾನ ಪಡೆದರು. ಲಕ್ಷ್ಮೀ ಸುಬ್ಬಾರಾವ್ 8.10 ಲೀ.ಹಾಲು ಕರೆದು ದ್ವಿತೀಯ ಬಹುಮಾನ, ಜಿ.ದೇವಿ ತಿರುಪತೆಯ್ಯ 7.4 ಲೀ.ಹಾಲು ಕರೆದು ತೃತೀಯ ಬಹುಮಾನ ಗಳಿಸಿದರು.
ಮೆಟ್ರಿಯ ಪಶು ವೈದ್ಯಾಧಿಕಾರಿ ಪ್ರದೀಪ್ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ಎಂ.ರಾಧಾ, ಕಾರ್ಯದರ್ಶಿಗಳಾದ ಪ್ರಭಾವತಿ, ಮುರುಳಿ, ಪ್ರಮುಖರಾದ ಚಂದ್ರಶೇಖರರಾವ್, ನಾಗೇಶ್ವರರಾವ್, ಪಶು ಇಲಾಖೆ ಸಿಬ್ಬಂದಿ ಶಿವಪ್ಪ ದೇವಕ್ಕಿ, ಕೆ.ದೇವೇಂದ್ರಪ್ಪ, ಟಿ.ರಾಮಚಂದ್ರ, ವಿನಾಯಕ, ಎಲ್.ರಾಕೇಶ್, ರೋಜಾ, ರವಿ, ಮಾನಸ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net