ನಾಣ್ಯ ಸಂಗ್ರಹಣೆ ಹವ್ಯಾಸಕಾರ

ನಾಣ್ಯ ಸಂಗ್ರಹಣೆ
ನಾಣ್ಯ ಸಂಗ್ರಹಣೆ
Published on

ಪ್ರಮುಖ ಮುಖ್ಯಾಂಶಗಳು

  • ಮೊಬೈಲ್
ಬಳ್ಳಾರಿ : ಪ್ರಸ್ತುತ ಅನೇಕ ಯುವಕರು ಮೊಬೈಲ್ ಗೀಳು ಹಚ್ಚಿಕೊಂಡಿದ್ದಾರೆ. ಆದರೆ, ಇಲ್ಲೊಬ್ಬರು ಪ್ರಾಚೀನ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ನಾಣ್ಯ ಹಾಗೂ ನೋಟುಗಳನ್ನು ಸಂಗ್ರಹಿಸುವ ಹವ್ಯಾಸ ಮೈಗೂಡಿಸಿಕೊಂಡಿದ್ದಾರೆ.
ವಿದ್ಯಾನಗರದ ನಿವಾಸಿ ಇಲಿಯಾಸ್ ವಾಸೀಂ ಎಂಬವರು ಖಾಸಗಿ ಕಂಪನಿಯ ಅಕೌಟೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜಯನಗರ ಸಾಮ್ರಾಜ್ಯ, ದೆಹಲಿ ಸುಲ್ತಾನರು, ಬಹುಮನಿ, ಮೈಸೂರು ಒಡೆಯರ ಕಾಲದಲ್ಲಿ ಬಳಸುತ್ತಿದ್ದ ನಾಣ್ಯಗಳು ಹಾಗೂ ದೇಶದ ಮೊದಲ ನಯಾ ಪೈಸೆಯಿಂದ ಹಿಡಿದು ಪ್ರಸ್ತುತ ಚಲಾವಣೆ ನೋಟಿನವರೆಗೂ ಸಂಗ್ರಹಿಸಿ ಇಟ್ಟಿಕೊಂಡಿದ್ದಾರೆ. ವಾಸೀಂ ಅವರು ಕಳೆದ ಕೆಲ ವರ್ಷಗಳ ಹಿಂದೆ ಖಾಸಗಿ ಶುದ್ಧ ನೀರು ಘಟಕದಲ್ಲಿನ ನಾಣ್ಯಗಳ ಸಂಗ್ರಹಣೆಯಿಂದ ಹವ್ಯಾಸ ಬೆಳೆಸಿಕೊಂಡಿದ್ದಾರೆ. ವರ್ಷದಿಂದ ವರ್ಷಕ್ಕೆ ದೇಶ ವಿದೇಶಗಳ ನಾಣ್ಯ - ನೋಟುಗಳನ್ನು ಸಂಗ್ರಹಿಸುತ್ತಿದ್ದಾರೆ. ಅಮೆರಿಕಾ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಜಪಾನ್, ನೇಪಾಳ, ದಕ್ಷಿಣ ಆಫ್ರಿಕಾ ಸೇರಿದಂತೆ ಅನೇಕ ರಾಷ್ಟ್ರಗಳ ನಾಣ್ಯಗಳ ಸಂಗ್ರಹಿಸಿರುವುದು ವಿಶೇಷವಾಗಿದೆ.
ಕೋಟ್.. ಶುದ್ಧ ಕುಡಿವ ನೀರಿನ ಘಟಕದಲ್ಲಿನ ಹೊಸ, ಹಳೆಯ ನಾಣ್ಯಗಳ ಕಂಡು ನಾಣ್ಯ ಸಂಗ್ರಹಿಸುವಲ್ಲಿ ಆಸಕ್ತಿ ಬೆಳೆಸಿಕೊಂಡೆ. ದೇಶ ಸೇರಿದಂತೆ ನಾನಾ ವಿದೇಶಿಗಳ ನೋಟಗಳು ಸಂಗ್ರಹಣೆ ಮಾಡಿರುವೆ. ಇದೊಂದು ನಾಣ್ಯ ಸಂಗ್ರಹಣೆಯೂ ಹವ್ಯಾಸವಾಗಿ ಮಾರ್ಪಾಟ್ಟಿದೆ.
- ಇಲಿಯಾಸ್ ವಾಸೀಂ, ನಾಣ್ಯ ಸಂಗ್ರಹಣಕಾರ, ಬಳ್ಳಾರಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net