ಮೂವರು ಪೊಲೀಸ್ ಅಧಿಕಾರಿಗಳಿಗೆ ಸಿಎಂ ಪದಕ

ಮೂವರು ಪೊಲೀಸ್ ಅಧಿಕಾರಿಗಳಿಗೆ ಸಿಎಂ ಪದಕ
ಮೂವರು ಪೊಲೀಸ್ ಅಧಿಕಾರಿಗಳಿಗೆ ಸಿಎಂ ಪದಕ
Published on

ಪ್ರಮುಖ ಮುಖ್ಯಾಂಶಗಳು

  • ಪೊಲೀಸ್
ಬಳ್ಳಾರಿ : ಕರ್ತವ್ಯದಲ್ಲಿ ತೋರಿದ ಅಪ್ರತಿಮ ಸೇವೆ ಮತ್ತು ದಕ್ಷತೆ ಪರಿಗಣಿಸಿ, ಜಿಲ್ಲೆಯ ಮೂವರು ಪೊಲೀಸ್ ಅಧಿಕಾರಿಗಳಿಗೆ 2025ನೇ ಸಾಲಿನ ‘ಮುಖ್ಯಮಂತ್ರಿ ಪದಕ’ ಘೋಷಿಸಿದೆ.
ಎಸ್ಪಿ ಡಾ. ಸುಮನ್ ಡಿ. ಪನ್ನೇಕರ್, ಸಂಚಾರ ಠಾಣೆ ಪಿಎಸ್‌ಐ ಕಾಳಿಂಗ, ಸಿರಗುಪ್ಪ ಠಾಣೆ ಪಿಎಸ್‌ಐ ಪರಶುರಾಮ ಅವರಿಗೆ ಪದಕ ಲಭಿಸಿದೆ. ಕಾನೂನು ಸುವ್ಯವಸ್ಥೆ, ಅಪರಾಧ ತಡೆಗಟ್ಟುವಿಕೆ ಮತ್ತು ಸಾರ್ವಜನಿಕ ಸೇವೆಯಲ್ಲಿ ತೋರಿದ ಪ್ರಾಮಾಣಿಕ ಪ್ರಯತ್ನಕ್ಕಾಗಿ ಈ ಅಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಜಿಲ್ಲೆಯ ಮೂವರು ಅಧಿಕಾರಿಗಳು ಆಯ್ಕೆಯಾಗಿರುವುದು ಪೊಲೀಸ್ ವಲಯದಲ್ಲಿ ಸಂತಸ ಮೂಡಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net