ಜಿಪಂ ಸಿಇಒ ಮಹ್ಮದ್ ಹ್ಯಾರೀಸ್ ಸುಮೇರ್ ಮಾತನಾಡಿ, ಜನವರಿ-ಫೆಬ್ರವರಿಯಿಂದ ಆಗಷ್ಟ್‌ವರೆಗೆ ಕೂಲಿಕಾರರಿಗೆ ಕೆಲಸವಿರುವುದಿಲ್ಲ. ಆಗ ಉದ್ಯೋಗ ಖಾತ್ರಿ ಕೆಲಸಕ್ಕೆ ಬರುತ್ತಾರೆ. ಆಗಷ್ಟ್‌ನಿಂದ ಜನವರಿವರೆಗೆ ಕೃಷಿ ಚಟುವಟಿಕೆಗಳಿರುವುದರಿಂದ ಕೆಲಸಕ್ಕೆ ಬರುವುದಿಲ್ಲ. ನರೇಗಾ ಯೋಜನೆಯಡಿ ಜಾಬ್ ಕಾರ್ಡ್ ಮತ್ತು ಏಳು ವಹಿಗಳನ್ನು ಪರಿಶೀಲಿಸಿ ಗ್ರಾಪಂನಲ್ಲಿ ಸಾಮಗ್ರಿ ಆಧಾರಿತ ಶಾಲಾ ಆಟದ ಮೈದಾನ, ಕೃಷಿ ಇಲಾಖೆಯಿಂದ ಅನುಷ್ಠಾನಗೊಂಡ ಕಿರು ಕಾಲುವೆ, ಹಳ್ಳ, ಕೊಳ್ಳ, ಕೆರೆಗಳಲ್ಲಿ ಹೊಳೆತ್ತುವುದು, ಬಾಳೆ ತೋಟ, ದನದ ಕೊಟ್ಟಿಗೆ ಮತ್ತಿತರ ಕಾಮಗಾರಿಗಳನ್ನು ಕೈಗೊಳ್ಳಲಾಗುವುದೆಂದು ವಿವರಿಸಿದರು.