ಇಲ್ಲಿನ ಗಡಗಿ ಚನ್ನಪ್ಪ ವೃತ್ತದಿಂದ ಎಪಿಎಂಸಿ, ಸಂಗಮ್ ವೃತ್ತದಿಂದ ತಾರಾನಾಥ್ ಆಸ್ಪತ್ರೆ ಹಾಗೂ ದುರ್ಗಮ್ಮ ದೇವಸ್ಥಾನದಿಂದ ತಾಳೂರು ರಸ್ತೆಯ ಪುಟಪಾತ್ ರಸ್ತೆಗಳಲ್ಲಿ ತೆರವು ಕಾರ್ಯಾಚರಣೆ ನಡೆಯಿತು. ಪಾಲಿಕೆಯ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿಯಾಗಿ ಕಾರ್ಯ ನಿರ್ವಹಿಸಿದರು. ಕಾರ್ಯಾಚರಣೆಯ ವೇಳೆ ನಗರದ ನಾನಾ ಪುಟಪಾತ್‌ಗಳಲ್ಲಿ ಅಕ್ರಮವಾಗಿ ತಾತ್ಕಲಿಕವಾಗಿ ನಿರ್ಮಿಸಿದ್ದ 65ಕ್ಕೂ ಹೆಚ್ಚು ಶೆಡ್, ನಾಮಫಲಕ ಹಾಗೂ ಬೀದಿಬದಿ ಅಂಗಡಿಗಳನ್ನು ತೆರವುಗೊಳಿಸಲಾಯಿತು.