ಹಣ ದುರ್ಬಳಕೆ ಸಿಐಡಿ ತನಿಖೆ

ಹರಪನಹಳ್ಳಿ ತಾಲೂಕಿನ ಹೊಸಕೋಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಹಣ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿ ಹಿತೇಂದ್ರ ನೇತೃತ್ವದ ತಂಡ ತನಿಖೆ ನಡೆಸಿತು. ಸಂಘದ ಕಾರ್ಯದರ್ಶಿ ಬಿ.ಎಚ್.ಮಂಜುನಾಥ, ಅಧ್ಯಕ್ಷ ಸುರೇಶ್, ಕಂಪ್ಯೂಟರ್ ಆಪರೇಟರ್ ಎಚ್.ಕರಿಬಸಪ್ಪ, ಸಿಬ್ಬಂದಿ ಮೋಹನ್ ರೆಡ್ಡಿ, ಬಸವರಾಜ್ ಇದ್ದರು.

Published on
ಹರಪನಹಳ್ಳಿ: ಹೊಸಕೋಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಹಣ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳ ತಂಡ ಮಂಗಳವಾರ ತನಿಖೆ ಆರಂಭಿಸಿತು.
ಸಹಕಾರ ಸಂಘದಲ್ಲಿ ರೈತರ ಠೇವಣಿ, ಸಾರ್ವಜನಿಕರ ಪಿಗ್ಮಿ ಹಣ, ಸಾಲ ಸೇರಿದಂತೆ ಒಟ್ಟು ನಾಲ್ಕು ಕೋಟಿ ರೂ.ಗೂ ಅಧಿಕ ಮೊತ್ತದ ಹಣವನ್ನು ಈ ಹಿಂದಿನ ಕಾರ್ಯದರ್ಶಿ ಭೀಮಪ್ಪ ದುರ್ಬಳಕೆ ಮಾಡಿಕೊಂಡಿರುವ ಆರೋಪ ಕೇಳಿ ಬಂದಿತ್ತು.
ಈ ಕುರಿತು ಈಗಿನ ಅಧ್ಯಕ್ಷ ಸುರೇಶ್ ಮತ್ತು ಆಡಳಿತ ಮಂಡಳಿ ಪ್ರಕರಣ ದಾಖಲಿಸಿದ್ದರು. ಅರಸೀಕೆರೆ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಸಂಘದಲ್ಲಿ ಹಣ ದುರ್ಬಳಕೆಯಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿತ್ತು. ಪ್ರಾಥಮಿಕ ವರದಿ ತಯಾರಿಸಿ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿದ್ದರು. ಸಿಐಡಿ ಅಧಿಕಾರಿ ಹಿತೇಂದ್ರ ನೇತೃತ್ವದ ತಂಡ ಸಂಘದ ನೌಕರರ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net