ಜಿಲ್ಲಾದ್ಯಂತ ಕ್ರಿಸ್ ಮಸ್ ಆಚರಣೆ

ಬಳ್ಳಾರಿಯ ಆರೋಗ್ಯ ಮಾತೆಯ ಚರ್ಚ್‌ನನ್ನು ಕ್ರಿಸ್ ಮಸ್ ಹಬ್ಬದ ಅಂಗವಾಗಿ ಅಲಂಕಾರಿಸಲಾಗಿತ್ತು.
ಬಳ್ಳಾರಿಯ ಆರೋಗ್ಯ ಮಾತೆಯ ಚರ್ಚ್‌ನನ್ನು ಕ್ರಿಸ್ ಮಸ್ ಹಬ್ಬದ ಅಂಗವಾಗಿ ಅಲಂಕಾರಿಸಲಾಗಿತ್ತು.
Published on

ಪ್ರಮುಖ ಮುಖ್ಯಾಂಶಗಳು

  • ಯೇಸುಕ್ರಿಸ್ತ
  • ಆಕರ್ಷಕ
  • ಗ್ರಾಮೀಣ
ಬಳ್ಳಾರಿ : ಯೇಸುಕ್ರಿಸ್ತರ ಜನ್ಮ ಸ್ಮರಣೆಯ ಕ್ರಿಸ್ ಮಸ್ ಹಬ್ಬವನ್ನು ಜಿಲ್ಲೆ ಹಾಗೂ ಗ್ರಾಮೀಣದಲ್ಲಿ ಕ್ರೈಸ್ತರು ಶ್ರದ್ಧಾ ಭಕ್ತಿಯಿಂದ ಆಚರಿಸಿ ಸಂಭ್ರಮಿಸಿದರು.
ಜಿಲ್ಲೆಯ ಹಾಗೂ ನಗರ ನಾನಾ ಚರ್ಚ್‌ಗಳಲ್ಲಿ ವಿದ್ಯುತ್ ದೀಪಗಳಿಂದ ಆಕರ್ಷಕವಾಗಿ ಆಲಂಕರಿಸಲಾಗಿತ್ತು. ಚರ್ಚ್ ಹಾಗೂ ಕ್ರೈಸ್ತರ ಮನೆ ಆವರಣದಲ್ಲಿ ಆಕರ್ಷಕ ಗೋದಲಿಗಳು ಗಮನ ಸೆಳೆದವು. ಬುಧವಾರ ರಾತ್ರಿ ಚರ್ಚ್‌ಗಳಲ್ಲಿ ಜರುಗಿದ ವಿಶೇಷ ಪ್ರಾರ್ಥನೆಯಲ್ಲಿ ಕ್ರೈಸ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಯೇಸುವಿನ ಗೀತೆಗಳನ್ನು ಹಾಡಿದರು.
ಕ್ರಿಸ್ ಮಸ್ ಹಬ್ಬದ ಅಂಗವಾಗಿ ಕ್ರೈಸ್ತ ಸಮುದಾಯವರು ವಿಶೇಷ ಸಾಮೂಹಿಕ ಪ್ರಾರ್ಥನೆ ಮಾಡಿದರು. ಚರ್ಚ್‌ಗಳಲ್ಲಿ ಮೇಣದ ಬತ್ತಿ ಬೆಳಗಿಸಿ, ಪರಸ್ಪರ ಹಸ್ತಲಾಘವದ ಮೂಲಕ ಕ್ರಿಸ್ ಮಸ್ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಇಲ್ಲಿನ ವಿದ್ಯಾನಗರದಲ್ಲಿರುವ ಆರೋಗ್ಯ ಮಾತೆಯ ಚರ್ಚ್‌ನಲ್ಲಿ ನಗರದ ಸಾವಿರಾರು ಕ್ರೈಸ್ತ ಸಮುದಾಯದವರು ಸಾಮೂಹಿಕ ಪಾರ್ಥನೆ ಸಲ್ಲಿಸುವುದು ಕಂಡು ಬಂತು.
==
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net