ಕಡಲೆ ಬೆಳೆಗೆ ನಟೆ ರೋಗ

ಕಂಪ್ಲಿ ಹೊರವಲಯದಲ್ಲಿ ಬೆಳೆದ ಕಡಲೆ ಬೆಳೆಯನ್ನು ಕೃಷಿ ಇಲಾಖೆ ಉಪ ನಿರ್ದೇಶಕ ಎಸ್.ಎನ್.ಮಂಜುನಾಥ ಪರಿಶೀಲಿಸಿದರು. ಕೃಷಿ ಅಧಿಕಾರಿ ಕೆ.ಸೋಮಶೇಖರ, ರೈತರಾದ ಪುಲ್ಲಯ್ಯ, ದೊರೆಸ್ವಾಮಿ ಇತರರಿದ್ದರು.
ಕಂಪ್ಲಿ ಹೊರವಲಯದಲ್ಲಿ ಬೆಳೆದ ಕಡಲೆ ಬೆಳೆಯನ್ನು ಕೃಷಿ ಇಲಾಖೆ ಉಪ ನಿರ್ದೇಶಕ ಎಸ್.ಎನ್.ಮಂಜುನಾಥ ಪರಿಶೀಲಿಸಿದರು. ಕೃಷಿ ಅಧಿಕಾರಿ ಕೆ.ಸೋಮಶೇಖರ, ರೈತರಾದ ಪುಲ್ಲಯ್ಯ, ದೊರೆಸ್ವಾಮಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಡಲೆ ಬೆಳೆ
  • ನಟೆ ರೋಗ

ಕಡಲೆ ಬೆಳೆಗೆ ನಟೆ ರೋಗ

ಕಂಪ್ಲಿ: ಚಳಿಯಿಂದಾಗಿ ಕಡಲೆ ಬೆಳೆಗೆ ನಟೆ ರೋಗ ಕಾಣಿಸಿಕೊಂಡಿದೆ. ಇದರಿಂದ ಇಳುವರಿ ಕುಂಠಿತವಾಗುವ ಆತಂಕ ಎದುರಾಗಿದೆ. ಕೃಷಿ ಅಧಿಕಾರಿಗಳು ಗದ್ದೆಗಳಿಗೆ ಭೇಟಿ ನೀಡಿ ಕಡಲೆ ಬೆಳೆ ಪರಿಶೀಲಿಸಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ರೈತರಿಗೆ ಸಲಹೆ ನೀಡಿದ್ದಾರೆ.
ತಾಲೂಕಿನಲ್ಲಿ 378ಹೆಕ್ಟೇರ್ ಪ್ರದೇಶದಲ್ಲಿ ಜಾಕಿ ಹಾಗೂ ಜೆಜಿ11 ತಳಿಯ ಕಡಲೆ ಬೆಳೆಯಲಾಗಿದೆ. ಹೂ ಬಿಡುವ ಹಂತದಲ್ಲಿ ನಟೆ ರೋಗ ಕಾಣಿಸಿಕೊಂಡಿದೆ. ಈ ರೋಗಕ್ಕೀಡಾದ ಕಡಲೆ ಬೆಳೆಯ ಎಲೆ, ಕಾಂಡ ಕೆಂಪಾಗಿ ಒಣಗುತ್ತಿದೆ.
ಬೆಳೆ ವಿಮೆ: ಬೇಸಿಗೆ ಭತ್ತದ ಬೆಳೆಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಸೌಲಭ್ಯ ಪಡೆಯಲು ಫೆ.28ರ ವರೆಗೆ ಅವಕಾಶವಿದ್ದು, ರೈತರು ಸದ್ಬಳಕೆ ಮಾಡಿಕೊಳ್ಳಬೇಕು.
ನೀರಾವರಿ ಪ್ರದೇಶದ ಒಂದು ಎಕರೆ ಭತ್ತಕ್ಕೆ 566ರೂ. ಕಂತು ಪಾವತಿಸಬೇಕೆಂದು ಕೃಷಿ ಅಧಿಕಾರಿ ಕೆ.ಸೋಮಶೇಖರ್ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net