ಉತ್ತಮ ಕಾರ್ಯಗಳಿಂದ ಬದುಕು ಜೀವಂತ

ಹರಪನಹಳ್ಳಿಯ ಹಾಲವರ್ತಿ ಮಠದಲ್ಲಿ ಹಮ್ಮಿಕೊಂಡಿದ್ದ ತಿಂಗಳ ಅರಿವಿನ ಬೆಳಕು ದತ್ತಿ ಕಾರ್ಯಕ್ರಮದಲ್ಲಿ ಲಿಂಗನಾಯಕನಹಳ್ಳಿಯ ಚನ್ನವೀರ ಮಹಾಶಿವಯೋಗಿ ಸ್ವಾಮೀಜಿ ಶರಣರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಶಿಕ್ಷಕ ವಿಠೋಬ ಎಸ್.ಎಚ್., ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಬಣಕಾರ್ ರಾಜಶೇಖರ್, ಪ್ರಮುಖರಾದ ಶಾಂತವೀರಯ್ಯ, ಪಿಎಚ್‌ಎಂ ಕೊಟ್ರಯ್ಯ, ಗುರುಸಿದ್ದಯ್ಯ, ಜಯಶ್ರೀ, ಬಸವರಾಜ್ ಗಾಣಿಗೇರ, ಶ್ವೇತಾ, ಕರಿಬಸವರಾಜು, ಬಸವರಾಜ್, ಪತ್ರಕರ್ತರಾದ ಎನ್. ರವಿ, ಚಂದ್ರಪ್ಪ ಇದ್ದರು.

Published on

ಹರಪನಹಳ್ಳಿ: ಭೂಮಿಯ ಮೇಲೆ ಗರ್ವದಿಂದ ಜೀವಿಸಬಾರದು. ಕಾರಣ ಕೊನೆಯ ಕಾಲಘಟ್ಟವು ಶೂನ್ಯದಿಂದ ಕೂಡಿರುತ್ತದೆ ಎಂದು ಲಿಂಗನಾಯಕನಹಳ್ಳಿಯ ಚನ್ನವೀರ ಮಹಾಶಿವಯೋಗಿ ಸ್ವಾಮೀಜಿ ಹೇಳಿದರು.

ನಗರ ಹೊರವಲಯದಲ್ಲಿರುವ ಹಾಲವರ್ತಿ ಮಠದಲ್ಲಿ ಚನ್ನವೀರ ಶಿವಾನುಭವ ಬಳಗ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ತಿಂಗಳ ಅರಿವಿನ ಬೆಳಕು, 25ನೇ ಶಿವಾನುಭವ ಸಂಪದ ಮತ್ತು ದತ್ತಿ ಉಪನ್ಯಾಸ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ನಾವು ಮಾಡುವ ಉತ್ತಮ ಕಾರ್ಯಗಳು ಸಾವಿನ ನಂತರವೂ ನಮ್ಮನ್ನು ಜೀವಂತವಿಡುತ್ತವೆ ಎಂದರು. ಶರಣರು ಮತ್ತು ಸಾಹಿತ್ಯ ಇರದಿದ್ದರೆ ಜಗತ್ತಿನಲ್ಲಿ ಮೌನ ಆವರಿಸಿ ಅಂಧಕಾರದಲ್ಲಿ ಮುಳುಗಿರುತ್ತಿತ್ತು. ಶರಣ ಸಾಹಿತ್ಯ ಪ್ರಕಾರವು ಸರ್ವರ ಬದುಕಿನ ಅಂಧಕಾರ ಅಳಿದು ಅನಿಷ್ಟ ಪದ್ಧತಿಗಳನ್ನು ದೂರ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದರು.

ನೀಲಗುಂದ ಗುಡ್ಡದ ವಿರಕ್ತ ಮಠದ ಚನ್ನಬಸವ ಶಿವಯೋಗಿ ಸ್ವಾಮೀಜಿ ಮಾತನಾಡಿ, ಗುರುವಿನ ಗುಲಾಮನಾಗದ ಹೊರತು ಮುಕ್ತಿ ದೊರೆಯುವುದಿಲ್ಲ. ಶರಣರ ಸಂಸ್ಕೃತಿಯ ಆಳಕ್ಕಿಳಿಯದ ಹೊರತು ನೈಜ ಜ್ಞಾನ ವೃದ್ಧಿಯಾಗದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net