ಅಲ್ಲಂ ಭವನದಲ್ಲಿ ಸ್ಯಾರಿಥಾನ್

ಬಳ್ಳಾರಿಯ ಅಲ್ಲಂಭವನದಲ್ಲಿ ಆಯೋಜಿಸಿದ್ದ ಸ್ಯಾರಿಥಾನ್‌ಗೆ ಅದ್ಯ ಸಂಸ್ಥೆಯ ಪರಿಚಾಲಕಿ ಅಲ್ಲಂ ರಚನಾ ವಿನಾಯಕ ಚಾಲನೆ ನೀಡಿದರು. ಫಿಟ್ನೆಸ್ ಬೋಧಕಿ ಪಲ್ಲವಿ, ವಾಣಿ, ರೂಪಶ್ರೀ, ಉಜ್ವಲಾ ಇತರರಿದ್ದರು.
ಬಳ್ಳಾರಿಯ ಅಲ್ಲಂಭವನದಲ್ಲಿ ಆಯೋಜಿಸಿದ್ದ ಸ್ಯಾರಿಥಾನ್‌ಗೆ ಅದ್ಯ ಸಂಸ್ಥೆಯ ಪರಿಚಾಲಕಿ ಅಲ್ಲಂ ರಚನಾ ವಿನಾಯಕ ಚಾಲನೆ ನೀಡಿದರು. ಫಿಟ್ನೆಸ್ ಬೋಧಕಿ ಪಲ್ಲವಿ, ವಾಣಿ, ರೂಪಶ್ರೀ, ಉಜ್ವಲಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಆಯೋಜನೆ
ಅಲ್ಲಂ ಭವನದಲ್ಲಿ ಸ್ಯಾರಿಥಾನ್
* ಅದ್ಯ ಸಂಸ್ಥೆಯಿಂದ ಆಯೋಜನೆ
ವಿಜಯವಾಣಿ ಸುದ್ದಿಜಾಲ ಬಳ್ಳಾರಿ
ಇಲ್ಲಿನ ಅಲ್ಲಂಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಅದ್ಯ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಮಹಿಳೆಯರಲ್ಲಿ ಕ್ಯಾನ್ಸರ್ ಜಾಗೃತಿ ಮೂಡಿಸಲು ವಿನೂತನವಾಗಿ ನಡೆದ ‘ಸ್ಯಾರಿಥಾನ್ ’ ಯಶ್ವಸಿಯಾಗಿ ನಡೆಯಿತು.
ನಗರದಲ್ಲಿ ಅದ್ಯ ಸಂಸ್ಥೆ ಹಾಗೂ ವಿಜಯವಾಣಿ ಸಹಯೋಗದೊಂದಿಗೆ ನಡೆದ ಸ್ಯಾರಿಥಾನ್‌ನಲ್ಲಿ ಕ್ಯಾನ್ಸರ್ ಜಾಗೃತಿ ಕುರಿತು ಬಿಮ್ಸ್ ಕ್ಯಾನ್ಸರ್ ತಜ್ಞ ಡಾ. ಮಾಣಿಕ್ಯ ರಾವ್ ಅವರ ಮಾರ್ಗದರ್ಶನದೊಂದಿಗೆ ಸಂಸ್ಕೃತಿ ಪರಂಪರೆ ಒಟ್ಟುಗೂಡಿಸುವ ವಿಶಿಷ್ಠ ಕಾರ್ಯಕ್ರಮವಾಗಿ ಹೊರಹೊಮ್ಮಿತು. ಇತ್ತೀಚಿನ ದಿನಗಳಲ್ಲಿ ಕೆಲವು ಮಹಿಳೆಯರು ಮತ್ತು ಯುವತಿಯರು ಸೀರೆ ಧರಿಸುವುದು ಹಳೆಯ ಪದ್ಧತಿ ಎಂದು ಭಾವಿಸುತ್ತಿದ್ದಾರೆ. ಈ ಮನೋಭಾವವನ್ನು ಬದಲಾಯಿಸಲು ಅದ್ಯ ಸಂಸ್ಥೆಯ ಪರಿಚಾಲಕಿ ಅಲ್ಲಂ ರಚನಾ ವಿನಾಯಕ ಅವರು ಹೊಸ ಪ್ರಯತ್ನ ಕೈಗೊಂಡರು. ಈ ಸ್ಯಾರಿಥಾನ್‌ನಲ್ಲಿ ಮಹಿಳೆಯರು ಸೀರೆ ಧರಿಸಿ ಮೂರು ಕಿ.ಮೀ. ಓಟದಲ್ಲಿ ಭಾಗವಹಿಸುವ ಮೂಲಕ ಕ್ಯಾನ್ಸರ್ ಜಾಗೃತಿಯ ಮಹತ್ವದ ಸಂದೇಶ ಸಮಾಜಕ್ಕೆ ನೀಡಿದರು. ಈ ಕಾರ್ಯಕ್ರಮದಲ್ಲಿ ಸುಮಾರು 300ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿ ಅದನ್ನು ಅತ್ಯಂತ ಯಶಸ್ವಿಯಾಗಿ ಮಾಡಿದರು. ಸಂಸ್ಥೆಯೂ ಮುಂಬರುವ ದಿನಗಳಲ್ಲಿ ಇನ್ನಷ್ಟು ಉತ್ತಮ ಕಾರ್ಯಕ್ರಮಗಳೊಂದಿಗೆ ದೊಡ್ಡ ಮಟ್ಟದಲ್ಲಿ ಆಚರಿಸುವ ನಿರೀಕ್ಷೆಯಿದೆ. ಅಲ್ಲಂ ವಿನಾಯಕ, ಡಾ.ಅಲ್ಲಂ ರಾಹುಲ್, ಪ್ರಶಾಂತ್ ಸರ್ದಾ, ಫಿಟ್ನೆಸ್ ಬೋಧಕಿ ಪಲ್ಲವಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net