ಆದರೆ, ನಷ್ಟ ವಸೂಲಿಗೆ ಸಂಬಂಧಿಸಿದಂತೆ 2025ರ ಆಗಸ್ಟ್ 18ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದ ಗಣೇಶ್, ಒಎಂಸಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಹೈದರಾಬಾದ್‌ನ ಸಿಬಿಐ ವಿಶೇಷ ನ್ಯಾಯಾಲಯ 2025ರ ಮೇ6ರಂದು ಪ್ರಕಟಿಸಿದ್ದ ತೀರ್ಪಿನ ಪ್ರತಿ ಲಗತ್ತಿದ್ದರು. ಜತೆಗೆ ಒಎಂಸಿ ಆಂಧ್ರ ಪ್ರದೇಶದಲ್ಲಿ ಗಣಿಗಳನ್ನು ಹೊಂದಿದ್ದರೂ, ಕರ್ನಾಟಕ ಗಣಿಗಳಿಂದ ಅದಿರನ್ನು ಕದ್ದು ಸಾಗಿಸಿರುವುದಾಗಿಯೂ, ಅದಕ್ಕಾಗಿ ರಸ್ತೆಗಳನ್ನು ಮಾಡಿಕೊಂಡಿದ್ದಾಗಿಯೂ, ಹೀಗೆ ಅಕ್ರಮವಾಗಿ ಸಾಗಿಸಿದ ಅದಿರನ ಪ್ರಮಾಣ 28,49,613 ಟನ್‌ಗಳಾಗಿದ್ದು ಒಟ್ಟು ಮೌಲ್ಯ 884.13 ಕೋಟಿ ಎಂಬುದಾಗಿ ಕೋಟಿ ರೂ. ಎಂದು ಸಿಬಿಐ ತೀರ್ಪಿನಲ್ಲಿ ಉಲ್ಲೇಖಿಸಿತ್ತು.