ಡಿಜಿಟಿಲ್ ರೂಪದಲ್ಲಿ ಜನಗಣತಿ

ಡಿಜಿಟಿಲ್ ರೂಪದಲ್ಲಿ ಜನಗಣತಿ
ಡಿಜಿಟಿಲ್ ರೂಪದಲ್ಲಿ ಜನಗಣತಿ
Published on

ಪ್ರಮುಖ ಮುಖ್ಯಾಂಶಗಳು

  • ಜನಗಣತಿ
ಬಳ್ಳಾರಿ : ದೇಶದ 16ನೇ ಜನಗಣತಿಯು ಏಪ್ರಿಲ್ ಒಂದರಿಂದ ಆರಂಭಗೊಳ್ಳಲಿದ್ದು, ಎರಡು ಹಂತದಲ್ಲಿ ನಡೆಯಲಿದೆ. ಇದು ಭಾರತ ಸ್ವಾತಂತ್ರ್ಯಪಡೆದ ನಂತರ ನಡೆಯುವ ಎಂಟನೇ ಜನಗಣತಿಯಾಗಿದೆ ಎಂದು ಡಿಸಿ ನಾಗೇಂದ್ರ ಪ್ರಸಾದ್ ಕೆ., ಹೇಳಿದರು.
ಇಲ್ಲಿನ ಡಿಸಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಬಾರಿಯ ಜನಗಣತಿಯು ಸಂಪೂರ್ಣ ಡಿಜಿಟಲ್ ರೂಪದಲ್ಲಿ ನಡೆಯಲಿದ್ದು, ಹೀಗಾಗಿ ನಾಗರಿಕರಿಗೆ ಆನ್‌ಲೈನ್ ಮೂಲಕ ಸ್ವಯಂ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಜನಗಣತಿಯ ಮೊದಲ ಹಂತವಾಗಿ ಏಪ್ರಿಲ್ 1 ರಿಂದ ಏಪ್ರಿಲ್ 15ರವರೆಗೆ ಸ್ವಯಂ ನೋಂದಣಿಗೆ ಸಾರ್ವಜನಿಕರು ವೆಬ್‌ಸೈಟ್‌ನಲ್ಲಿ ಸ್ವಯಂ ಪ್ರೇರಿತರಾಗಿ ಮಾಹಿತಿ ದಾಖಲಿಸಲು ಅವಕಾಶ ನೀಡಲಾಗಿದೆ. ಬಳಿಕ ಏಪ್ರಿಲ್ 16 ರಿಂದ ಮೇ 15 ರವರೆಗೆ ಜನಗಣತಿದಾರರು ಮನೆಗೆ ಭೇಟಿ ನೀಡಿ ಮನೆಗಳ ಪಟ್ಟಿ ಮತ್ತು ಜನಗಣತಿ ಕಾರ್ಯವನ್ನು ಕೈಗೊಳ್ಳಲಿದ್ದಾರೆ. ನಂತರ ಫೆಬ್ರವರಿ 2027 ರಲ್ಲಿ ಭೌತಿಕ ಗಣತಿ ಕಾರ್ಯ ನಡೆಯಲಿದೆ ಎಂದರು.
ಜಿಲ್ಲೆಯಲ್ಲಿ ಒಟ್ಟು 2,798 ಗಣತಿದಾರರು ಮತ್ತು 473 ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಇವರಲ್ಲಿ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರು ಸೇರಿದ್ದಾರೆ. ಜನಗಣತಿ ಕಾರ್ಯಕ್ಕೆ ಒಟ್ಟು 17 ಚಾರ್ಜ್ ಆಫೀಸರ್‌ಗಳನ್ನು ನೇಮಕ ಮಾಡಲಾಗಿದೆ. ಈಗಾಗಲೇ ಗಣತಿದಾರರಿಗೆ ತರಬೇತಿ ನೀಡಲಾಗಿದೆ ಎಂದು ವಿವರಿಸಿದರು.
ಜಿಲ್ಲಾದ್ಯಂತ ಒಟ್ಟು ಮನೆ ಪಟ್ಟಿಯ 2,544 ಬ್ಲಾಕ್‌ಗಳನ್ನು ಗುರುತಿಸಲಾಗಿದೆ. ಪ್ರತಿ ಬ್ಲಾಕ್‌ನಲ್ಲಿ ಅಂದಾಜು 150 ರಿಂದ 200 ಮನೆಗಳಿರಲಿವೆ. ಪ್ರತಿಯೊಂದು ಬ್ಲಾಕ್ ಅನ್ನು ಗೂಗಲ್ ಮ್ಯಾಪ್ ಮೂಲಕ ಜಿಯೋ ಟ್ಯಾಗ್ ಮಾಡಲಾಗಿದೆ ಎಂದರು. ಎಡಿಸಿ ಮಹಮ್ಮದ್ ಎನ್.ಜುಬೇರ್, ಪಾಲಿಕೆ ಆಯುಕ್ತ ಪಿ.ಎಸ್.ಮಂಜುನಾಥ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net