ನಾಗರಹುಣಸೆ ಗ್ರಾಮದಲ್ಲಿ ಮೊಹರಂ ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಪಿಎಸ್‌ಐ ಸುಬ್ರಮಣ್ಯಂ ಮಾತನಾಡಿದರು. ಪ್ರಮುಖರಾದ ಗೌಡ್ರು ಮಂಜುನಾಥ್, ಜಿ.ರಾಮಚಂದ್ರಪ್ಪ, ಎಸ್.ನಾಗಪ್ಪ, ಜಿ.ರಾಂಮೂರ್ತೆಪ್ಪ, ಗ್ರಾಪಂ ಮಾಜಿ ಸದಸ್ಯರಾದ ಜಿ.ಕೆ.ತಿಪ್ಪೇಸ್ವಾಮಿ, ಜಿ.ಸೋಮಪ್ಪ,ಎನ್.ರಾಜೇಶ, ಪೋಲೀಸ್ ಪೇದೆಗಳಾದ ಎನ್.ಗುರುಸ್ವಾಮಿ, ಉಜ್ಜಪ್ಪ, ಹುಡೇಂ ನಾಗೇಶ ಇತರರಿದ್ದರು.
ಕಾನಹೊಸಹಳ್ಳಿ: ಮೊಹರಂ ಹಬ್ಬವನ್ನು ಸೌಹಾರ್ದತೆ ಮತ್ತು ಶಾಂತಿಯುತವಾಗಿ ಆಚರಿಸಬೇಕು ಎಂದು ಗುಡೇಕೋಟೆ ಪಿಎಸ್‌ಐ ಸುಬ್ರಮಣ್ಯಂ ಜಿ ಹೇಳಿದರು.
ನಾಗರಹುಣಸೆಯಲ್ಲಿ ಶನಿವಾರ ಮೊಹರಂ ಅಂಗವಾಗಿ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಮಾತನಾಡಿ, ಹಬ್ಬ ಆಚರಣೆ ಸಂದರ್ಭದಲ್ಲಿ ಕಿಡಿಗೇಡಿಗಳು ಗದ್ದಲ ಮಾಡಿದರೆ ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು.
ಎಲ್ಲ ಸಮಾಜದ ಜನರು ಪರಸ್ಪರ ಸಹಕಾರದಿಂದ ಹಬ್ಬ ಆಚರಿಸುತ್ತಾ ಬಂದಿದ್ದಾರೆ. ಈ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಮೊಹರಂ ಹಬ್ಬದಲ್ಲಿ ಶಾಂತಿಗೆ ಭಂಗ ಉಂಟಾಗದಂತೆ ನೋಡಿಕೊಳ್ಳಲು ಊರಿನ ಯಜಮಾನರು, ಪ್ರಮುಖರು, ಮುತುವರ್ಜಿ ವಹಿಸಬೇಕು ಎಂದರು.