

ಪ್ರಮುಖ ಮುಖ್ಯಾಂಶಗಳು
ಕಂಪ್ಲಿಯಲ್ಲಿ ಸಿಡಿಪಿಒ ಕಚೇರಿ ಆರಂಭಿಸುವ ಅಗತ್ಯವಿದ್ದು, ಈ ಕುರಿತು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅನ್ನಪೂರ್ಣದೇವಿ, ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಪತ್ರ ಬರೆದು ಒತ್ತಾಯಿಸಲಾಗುವುದು. ಕಂಪ್ಲಿ ಮಹತ್ವಾಕಾಂಕ್ಷಿ ತಾಲೂಕು ಆಗಿದ್ದು ಮಹಿಳೆಯರು ಮತ್ತು ಮಕ್ಕಳ ಸರ್ವಾಂಗೀಣ ಪ್ರಗತಿಗಾಗಿ ಸಿಡಿಪಿಒ ಕಚೇರಿ ಆರಂಭಿಸಬೇಕು.
ಕಂಪ್ಲಿ ತಾಲೂಕನ್ನು ಬಳ್ಳಾರಿಗೆ ಸೇರ್ಪಡೆ ಮಾಡಿದ್ದರಿಂದ ಮೇಲ್ವಿಚಾರಕರ ಹುದ್ದೆ ಖಾಲಿ ಆಗಿವೆ. ಕಂಪ್ಲಿಯಲ್ಲಿ ಸಿಡಿಪಿಒ ಕಚೇರಿ ಆರಂಭಕ್ಕೆ ಕೇಂದ್ರ ಸರ್ಕಾರದ ಅನುಮೋದನೆ ಅಗತ್ಯವಿದ್ದು, ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಐದು ವಲಯಗಳನ್ನು ಒಬ್ಬರೇ ಮೇಲ್ವಿಚಾರಕಿ ನಿರ್ವಹಿಸುವುದು ಅನಿವಾರ್ಯ.