ಹರಪನಹಳ್ಳಿ ತಾಲೂಕಿನ ಅರಸೀಕೆರೆ ಗ್ರಾಮದಲ್ಲಿ ವೀರಶೈವ ಲಿಂಗಾಯತ ಪಂಚಾಮಸಾಲಿ ಸಮಾಜದಿಂದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಆಚರಿಸಲಾಯಿತು. ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ.ಅಣ್ಣಪ್ಪ, ಗ್ರಾಪಂ ಉಪಾಧ್ಯಕ್ಷೆ ನಂದ್ಯಮ್ಮ, ಸದಸ್ಯ ಅಡ್ಡಿ ಚನ್ನವೀರಪ್ಪ, ಪ್ರಮುಖರಾದ ಪ್ರಶಾಂತ್ ಪಾಟೀಲ್, ಪೊಲೀಸ್ ಕೊಟ್ರೇಶ್, ಎ.ಬಿ.ಅಜಯ್, ಬಸವರಾಜ, ಡಿ.ಮಲ್ಲಿಕಾರ್ಜುನ, ಎ.ಬಿ.ಮಂಜುನಾಥ ಗೌಡ, ಎ.ಎಚ್.ಚನ್ನಬಸಪ್ಪ ಇತರರಿದ್ದರು.
ಹರಪನಹಳ್ಳಿ: ಕಿತ್ತೂರು ರಾಣಿ ಚನ್ನಮ್ಮ ಅವರ ಧೈರ್ಯ, ಸ್ವಾಭಿಮಾನದ ಹೋರಾಟ ಎಲ್ಲರಿಗೂ ಸ್ಫೂರ್ತಿದಾಯಕ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ.ಅಣ್ಣಪ್ಪ ತಿಳಿಸಿದರು.
ಅರಸೀಕೆರೆ ಗ್ರಾಮದಲ್ಲಿ ವೀರಶೈವ ಲಿಂಗಾಯತ ಪಂಚಾಮಸಾಲಿ ಸಮಾಜ ವತಿಯಿಂದ ಭಾನುವಾರ ಆಯೋಜಿಸಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತಿಗೆ ಚಾಲನೆ ನೀಡಿ ಮಾತನಾಡಿದರು. ಸಮಾಜದಲ್ಲಿ ಜಾತಿ, ಮತಗಳ ನಡುವೆ ತಾರತಮ್ಯ ಹೆಚ್ಚಾಗುತ್ತಿದ್ದು, ಜನರು ಜಾತಿ ವ್ಯವಸ್ಥೆಯಿಂದ ಹೊರಬಂದು ಒಳ್ಳೆಯ ಮಾರ್ಗದಲ್ಲಿ ಬದುಕು ನಡೆಸಿದರೆ ದೇಶ ಸುಂದರ ರಾಷ್ಟ್ರವಾಗುತ್ತದೆ ಎಂದರು.
ವೀರಶೈವ ಲಿಂಗಾಯತ ಪಂಚಾಮಸಾಲಿ ಸಮಾಜದ ಗ್ರಾಮ ಘಟಕದ ಅಧ್ಯಕ್ಷ ಎ ಎಚ್ ಪಂಪಣ್ಣ ಮಾತನಾಡಿ, ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ ತಂದು ಕೊಡುವಲ್ಲಿ ಚನ್ನಮ್ಮ ಅವರ ಪಾತ್ರ ಅಪಾರವಾಗಿದೆ. ಸಮುದಾಯದವರು ಸರ್ವಧರ್ಮೀಯರೊಂದಿಗೆ ಅನ್ಯೋನ್ಯದಿಂದ ಬಾಳ್ವೆ ಮಾಡಿದರೆ ಚನ್ನಮ್ಮ ಅವರ ತತ್ವಾದರ್ಶಗಳನ್ನು ಪಾಲಿಸಿದಂತಾಗುತ್ತದೆ ಎಂದರು.