ಶವದ ಎದುರು ರಾಷ್ಟ್ರಗೀತೆ ಪ್ರಕರಣ ದಾಖಲು

ಶವದ ಎದುರು ರಾಷ್ಟ್ರಗೀತೆ ಪ್ರಕರಣ ದಾಖಲು
ಶವದ ಎದುರು ರಾಷ್ಟ್ರಗೀತೆ ಪ್ರಕರಣ ದಾಖಲು
Published on

ಪ್ರಮುಖ ಮುಖ್ಯಾಂಶಗಳು

  • ರಾಷ್ಟ್ರಗೀತೆ
ಬಳ್ಳಾರಿ : ತಾಲೂಕಿನ ಶ್ರೀಧರಗಡ್ಡೆ ಗ್ರಾಮದಲ್ಲಿ ಶವದ ಎದುರು ಖಾಸಗಿ ಶಾಲೆಯ ಮಕ್ಕಳಿಂದ ರಾಷ್ಟ್ರಗೀತೆ ಹಾಡಿಸಿದ ಪ್ರಕರಣ ಸಂಬಂಧ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.
2026ರ ಜ.28ರಂದು ಶ್ರೀಧರಗಡ್ಡೆಯಲ್ಲಿ ಸಣ್ಣಕ್ಕಿ ಕಾಮಾಕ್ಷಮ್ಮ ಎಂಬುವವರು ಮೃತಪಟ್ಟಿದ್ದರು. ಗ್ರಾಮದ ಶ್ರೀ ಗುರು ಸಂಗನ ಬಸವೇಶ್ವರ ಇಂಗ್ಲಿಷ್ ಮಾಧ್ಯಮ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನೆಲ್ಲ ಕರೆದೊಯ್ದಿದ್ದ ಮುಖ್ಯ ಶಿಕ್ಷಕ ಎಂ.ಹನುಮಂತಪ್ಪ ಸಾಲಾಗಿ ನಿಲ್ಲಿಸಿ ಶವದ ಮುಂದೆ ರಾಷ್ಟ್ರಗೀತೆ ಹಾಡಿಸಿದ್ದಾರೆ. ಈ ಘಟನೆ ಖಂಡಿಸಿರುವ ಗ್ರಾಮದ ಕೆಲ ಮಂದಿ ವಿಡಿಯೋ ಸಹಿತ ಫೆ.16ರಂದು ಜಿಲ್ಲಾಡಳಿತಕ್ಕೆ ದೂರು ಅರ್ಜಿ ನೀಡಿದ್ದರು. ಶಾಲೆಯ ಅಧ್ಯಕ್ಷರಾಗಿರುವ ಹನುಮಂತಪ್ಪ ಅವರು ಈ ಹಿಂದೆಯೂ ಹಲವು ಸಲ ಹೀಗೆ ನಡೆದುಕೊಂಡಿದ್ದರು ಎಂದು ಕೆಲವರು ಮಾಹಿತಿ ನೀಡಿದ್ದರು. ಈ ಸಂಬಂಧ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆಗೆ ದೂರು ಸಲ್ಲಿಕೆಯಾಗಿತ್ತು.
==
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net