ಪ್ರಕರಣ ಬದಲಾವಣೆ ಹುನ್ನಾರ

 ನಾರಾ ಭರತರೆಡ್ಡಿ
ನಾರಾ ಭರತರೆಡ್ಡಿ
Published on

ಪ್ರಮುಖ ಮುಖ್ಯಾಂಶಗಳು

  • ರಾಕ್ಷಸರು
  • ನ್ಯಾಯಾಧೀಶ
  • ಕಾಂಗ್ರೆಸ್
ಬಳ್ಳಾರಿ : ಈಚೆಗೆ ಸುಪ್ರಿಂ ಕೋರ್ಟ್ ನಿ.ನ್ಯಾಯಾಧೀಶ ದುಲಿಂಶ ದುಲಿಯಾ ಸಮಿತಿಯೂ ಶಾಸಕ ಜನಾರ್ದನರೆಡ್ಡಿ ಅಕ್ರಮ ಗಣಿಗಾರಿಕೆ ಬಗ್ಗೆ ವರದಿ ನೀಡಿದ್ದು, ಆ ಪ್ರಕರಣ ಬದಲಾಯಿಸುವ ಉದ್ದೇಶದಿಂದ ಇಂತಹ ನೀಚ ಕೃತ್ಯಕ್ಕೆ ಇಳಿದಿದ್ದಾನೆ ಎಂದು ಶಾಸಕ ನಾರಾಭರತರೆಡ್ಡಿ ಕಿಡಿಕಾರಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇಂತಹ ರಾಕ್ಷಸರು ಎಷ್ಟು ಜನರ ಬಂದರೂ ನನ್ನನ್ನು ಏನು ಮಾಡಲು ಆಗುವುದಿಲ್ಲ. ಕಾಂಗ್ರೆಸ್ ಪಕ್ಷ, ರಾಜ್ಯ ನಾಯಕರು ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ಜತೆ ಮಾತನಾಡಿದ್ದು, ನಿಮ್ಮ ಜತೆ ನಾವಿದ್ದೇವೆ. ಯಾವುದೇ ಕಾರಣಕ್ಕೂ ಕುಗ್ಗಬೇಡ ಎಂಬುದಾಗಿ ಧೈರ್ಯ ತುಂಬಿದ್ದಾರೆ. ನಿಗದಿಯಂತೆ ರಾಜ್ಯದಲ್ಲಿನ ಸಮುದಾಯದ ಸಚಿವರು ಹಾಗೂ ಶಾಸಕರ ಸಮ್ಮುಖದಲ್ಲಿ ಜ.3ರಂದು ವಾಲ್ಮೀಕಿ ಪುತ್ಥಳಿ ಅನಾವರಣಗೊಳ್ಳಲಿದ್ದು, ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ , ಅದ್ಧೂರಿಯಾಗಿ ನೆರವೇರಲಿದೆ ಎಂದರು.
ಜಿಲ್ಲೆಯಲ್ಲಿ ಮೊದಲಿನಿಂದಲೂ ರಾಕ್ಷಸರ ಅಟ್ಟಹಾಸ ನಡೆಯುತ್ತಿದೆ. ಜನಾರ್ದನರೆಡ್ಡಿಯೊಬ್ಬ ನೀಚ. ಅವನ ಮನೆ ಮುಂದೆ ಬ್ಯಾನರ್ ಹಾಕಿಲ್ಲ. ರಸ್ತೆಯಲ್ಲಿ ಬ್ಯಾನರ್ ಹಾಕಿದಕ್ಕೆ ಅಕ್ಷೇಪಿಸಿ ಕಲ್ಲು ತೂರಾಟ ನಡೆಸಿ ಗಲಾಟೆಗೆ ಪ್ರೇರಪಿಸಿದ್ದಾರೆ ಎಂದು ಆರೋಪಿಸಿದರು. ಈ ಘಟನೆಯಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತ, ತಮ್ಮನ ಸಾವಾಗಿದ್ದು ದುಖಃ ದಲ್ಲಿದ್ದೇವೆ. ಇಂತಹ ರಾಕ್ಷಸರ ಮಟ್ಟ ಹಾಕುವೆ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net