ಬಳ್ಳಾರಿ : ಜಿಲ್ಲೆಯಲ್ಲಿ ಗಾಂಜಾ ಹಾಗೂ ಅಕ್ರಮ ಚಟುವಟಿಕೆಗಳ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಅಲ್ಲದೆ, ಕ್ಯಾಬಿನೆಟ್‌ನಲ್ಲಿಯೂ ಚರ್ಚಿಸಲಾಗಿದೆ ಎಂದು ಪೌರಾಡಳಿತ ಸಚಿವ ರಹೀಂ ಖಾನ್ ಹೇಳಿದರು.
ನಗರದಲ್ಲಿ ಧ್ವಜಾರೋಹಣ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಅಕ್ರಮ ಚಟುವಟಿಕೆಗಳನ್ನು ಮಟ್ಟ ಹಾಕಲು ಪೊಲೀಸರಿಗೆ ಸರ್ಕಾರ ಸೂಚಿಸಿದೆ. ಅಲ್ಲದೆ, ನಗರದಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣದ ಸಂಬಂಧ ಬ್ಯಾನರ್ ಗಲಾಟೆ ಬಗ್ಗೆಯೂ ಸರ್ಕಾರದ ಗಮನಕ್ಕಿಯಿದೆ ಎಂದರು.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ನೇತೃತ್ವದಲ್ಲಿ ರಾಜ್ಯ ಸರ್ಕಾರ ಎರಡೂವರೆ ವರ್ಷ ಯಶ್ವಸಿಯಾಗಿ ಪೂರೈಸಿದೆ. ಗ್ಯಾರಂಟಿ ಯೋಜನೆಗಳಲ್ಲದೆ ಬಡವರಿಗೆ ಹಾಗೂ ಮಹಿಳೆಯರಿಗೆ ಹೆಚ್ಚಿನ ಅನುದಾನ ನೀಡಿದೆ. ರೈತರ ಸಂಕಷ್ಟಕ್ಕೂ ಸ್ಪಂದಿಸಿದೆ ಎಂದರು.
ಸಂಸದ ಈ.ತುಕಾರಾಮ್ ಮಾತನಾಡಿ, ಅಕ್ರಮ ಗಣಿಗಾರಿಕೆ ವಿರುದ್ಧ ಈ ಹಿಂದೆ ಸಿದ್ದರಾಮಯ್ಯ ಅವರು ಪಾದಯಾತ್ರೆ ನಡೆಸಿದ್ದರು. 2010ರ ರಿಪಬ್ಲಿಕ್ ಆಫ್ ಬಳ್ಳಾರಿಯೂ ನೋಡಿರುವೆ. ಇತ್ತೀಚಿಗೆ ನಡೆದ ಗಲಾಟೆಯೂ ಬಗ್ಗೆ ಸರ್ಕಾರ ಗಮನಿಸಿದೆ ಎಂದರು.
ಜಿಲ್ಲೆಯಲ್ಲಿ ಮಟ್ಕಾ, ಗಾಂಜಾ ಹಾಗೂ ಅಕ್ರಮ ಚಟುವಟಿಕೆ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿರುವೆ. ಬ್ಯಾನರ್ ಗಲಾಟೆ ಪ್ರಕರಣದ ಬಗ್ಗೆ ಸಿಐಡಿ ತನಿಖೆ ನಡೆಸುತ್ತಿದ್ದು, ಕೆಲ ದಿನಗಳಲ್ಲೇ ಸಿಐಡಿಯ ಎಡಿಜಿಪಿ ಅವರೇ ಖುದ್ದಾಗಿ ಮಾಹಿತಿ ನೀಡಲಿದ್ದಾರೆ. ಅಲ್ಲಿವರೆಗೆ ಕಾಯಬೇಕು ಎಂದು ಹೇಳಿದರು.
ತುಂಗಭದ್ರ ಜಲಾಶಯ ಕ್ರಸ್ಟ್‌ಗೇಟ್‌ಗಳು ದುರಸ್ತಿಗೆ ಅಧಿಕಾರಿಗಳಿಗೆ ನೀಡಿದ್ದ ಹಣ ಸರ್ಕಾರ ವಾಪಾಸ್ ಪಡೆದಿಲ್ಲ. ನಿಗದಿತ ವೇಳೆ ಜೂನ್‌ಯೊಳಗೆ ಎಲ್ಲ ಗೇಟ್‌ಗಳು ಅಳವಡಿಸಿ ನಿಗದಿತ ವೇಳೆಗೆ ಉದ್ಘಾಟಿಸಲಾಗುವುದು. ಜಿಲ್ಲೆಗೆ ಉಸ್ತುವಾರಿ ಬಳ್ಳಾರಿಯವರೆ ಆಗಲಿದ್ದಾರೆ ಎಂದು ಆಶ್ವಾಸನೆ ನೀಡಿದರು.