ಈಗಾಗಲೇ ಪಂಜಾಬ್ ಮೂಲದ ಬಲ್ವಿಂಧರ್ ಸಿಂಗ್, ಗುರುಚರಣ್ ಸಿಂಗ್ ಬಂಧಿಸಲಾಗಿದೆ. ಪೊಲೀಸರು ಜಿಲ್ಲೆಯ ಶಾಸಕ ನಾರಾಭರತರೆಡ್ಡಿ, ಅಪ್ತ ಸತೀಶ್‌ರೆಡ್ಡಿಯ ಖಾಸಗಿ ಅಂಗರಕ್ಷಕರಿಂದ ಒಟ್ಟು ಐದು ಬಂದೂಕುಗಳನ್ನು ವಶಕ್ಕೆ ಪಡೆದು ಎಫ್‌ಎಸ್‌ಎಲ್ಗೆ ಕಳುಹಿಸಲಾಗಿತ್ತು. ವರದಿಯಲ್ಲಿ ಗುರುಚರಣ್ ಸಿಂಗ್ ಎಂಬ ಅಂಗರಕ್ಷಕನ ಬಂದೂಕಿನಿಂದ ಸಿಡಿದ ಗುಂಡಿನಿಂದ ಮೃತಪಟ್ಟಿರುವುದಾಗಿ ಬಹುತೇಕ ಖಚಿತವಾಗಿದೆ. ಇನ್ನೂ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸತೀಶ್ ರೆಡ್ಡಿ ಗಲಾಟೆಯಲ್ಲಿ ತಲೆಗೆ ಪೆಟ್ಟಾದ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ.