ಮದ್ಯ ಅಕ್ರಮ ಮಾರಾಟ ತಡೆಯಲಿ

ಚಿಂತ್ರಪಳ್ಳಿಯಲ್ಲಿ ಕರ್ನಾಟಕ ಮಾದರ ಮಹಾಸಭಾ ತಾಲೂಕು ಅಧ್ಯಕ್ಷ ಸ್ಥಾನ ಪೂಜಾರ್ ಲೋಕಪ್ಪಗೆ ಆದೇಶ ಪ್ರತಿ ವಿತರಿಸಲಾಯಿತು. ಡಾ.ಬಿ.ಆರ್.ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷ ಗದ್ದಿಕೆರೆ ಎಚ್.ದೊಡ್ಡಬಸಪ್ಪ, ಪ್ರಮುಖರಾದ ಟಿ.ಅರ್ಜುನ, ಮಾದೂರು ಕೆ.ಮಹೇಶ್ವರ, ಎ.ಕೆ.ಬುಳ್ಳಪ್ಪ, ಬ್ಯಾಲಾಳ್ ಮಂಜುನಾಥ ಇತರರಿದ್ದರು.
ಚಿಂತ್ರಪಳ್ಳಿಯಲ್ಲಿ ಕರ್ನಾಟಕ ಮಾದರ ಮಹಾಸಭಾ ತಾಲೂಕು ಅಧ್ಯಕ್ಷ ಸ್ಥಾನ ಪೂಜಾರ್ ಲೋಕಪ್ಪಗೆ ಆದೇಶ ಪ್ರತಿ ವಿತರಿಸಲಾಯಿತು. ಡಾ.ಬಿ.ಆರ್.ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷ ಗದ್ದಿಕೆರೆ ಎಚ್.ದೊಡ್ಡಬಸಪ್ಪ, ಪ್ರಮುಖರಾದ ಟಿ.ಅರ್ಜುನ, ಮಾದೂರು ಕೆ.ಮಹೇಶ್ವರ, ಎ.ಕೆ.ಬುಳ್ಳಪ್ಪ, ಬ್ಯಾಲಾಳ್ ಮಂಜುನಾಥ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗದ್ದಿಕೆರೆ ಎಚ್.ದೊಡ್ಡಬಸಪ್ಪ ಆಗ್ರಹ
  • ಆಯ್ಕೆ ಪತ್ರ ವಿತರಣೆ
ಹಗರಿಬೊಮ್ಮನಹಳ್ಳಿ: ತಾಲೂಕಿನಲ್ಲಿ ಮದ್ಯ ಅಕ್ರಮ ಮಾರಾಟ ತಡೆಯಬೇಕು ಎಂದು ಡಾ.ಬಿ.ಆರ್.ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷ ಗದ್ದಿಕೆರೆ ಎಚ್.ದೊಡ್ಡಬಸಪ್ಪ ಆಗ್ರಹಿಸಿದರು.
ಚಿಂತ್ರಪಳ್ಳಿಯಲ್ಲಿ ಕರ್ನಾಟಕ ಮಾದರ ಮಹಾಸಭಾ ತಾಲೂಕು ಅಧ್ಯಕ್ಷ ಪೂಜಾರ್ ಲೋಕಪ್ಪಗೆ ಆಯ್ಕೆ ಪತ್ರ ವಿತರಿಸಿ ಭಾನುವಾರ ಮಾತನಾಡಿದರು. ಪರಿಶಿಷ್ಟ ಜಾತಿ, ಪ್ರವರ್ಗ ಎ ಖೊಟ್ಟಿ ಪ್ರಮಾಣಪತ್ರ ನೀಡುವುದು ಮತ್ತು ಮಾದಿಗ ಜಾತಿ ಪ್ರಮಾಣಪತ್ರ ಪಡೆಯಲು ಕಡ್ಡಾಯವಾಗಿ ಅಫಿಡವಿಟ್ ಪಡೆಯುವುದನ್ನು ತಡೆಯಬೇಕು ಎಂದರು.
ಮಾದರ ಮಹಾಸಭಾ ತಾಲೂಕು ಅಧ್ಯಕ್ಷ ಪೂಜಾರ್ ಲೋಕಪ್ಪ ಮಾತನಾಡಿ, ಪಟ್ಟಣದಲ್ಲಿ ಡಾ.ಬಾಬು ಜಗಜೀವನರಾಮ್ ವೃತ್ತ ನಿರ್ಮಾಣಕ್ಕೆ ತಾಲೂಕು ಆಡಳಿತ ಅಥವಾ ಶಾಸಕರು ಸ್ಥಳ ನಿಗದಿಪಡಿಸಬೇಕು. ತಾಲೂಕಿನ ಗ್ರಾಮೀಣ ಪ್ರದೇಶದ ಮಾದರ ಸಮಾಜದ ಕಾಲನಿಗಳಲ್ಲಿ ಮೂಲ ಸೌಕರ್ಯ ಕಲ್ಪಿಸಬೇಕು. ಎಸ್ಸಿ-ಎಸ್ಟಿ ಕಾಲನಿಗಳ ಅಭಿವೃದ್ಧಿ ಯೋಜನೆ ಹಣ ಅದಕ್ಕಾಗಿಯೇ ಬಳಕೆಯಾಗಬೇಕು ಎಂದು ಒತ್ತಾಯಿಸಿದರು.
ಮಹಾಸಭಾ ಪ್ರಧಾನ ಕಾರ್ಯದರ್ಶಿ ವರಲಹಳ್ಳಿ ಶಿವಕುಮಾರ್, ಉಪಾಧ್ಯಕ್ಷರಾದ ಬೆಣಕಲ್ಲು ಎಚ್.ಪ್ರಕಾಶ, ಖಜಾಂಚಿ ಬಿ.ಜಿ.ಹಳ್ಳಿಯ ಎ.ಮಹೇಶ, ಜಿಲ್ಲಾ ಸಮಿತಿ ಪ್ರತಿನಿಧಿಗಳಾದ ದುರುಗಪ್ಪ, ನಿವೃತ್ತ ಶಿಕ್ಷಕ ಜಿ.ಮಾಯಪ್ಪ, ಪ್ರಮುಖರಾದ ಬ್ಯಾಲಾಳ್ ಮಂಜುನಾಥ, ಬುಳ್ಳಪ್ಪ, ಎನ್.ಮೈಲಪ್ಪ, ಪೂಜಾರ್ ಹನುಮಂತಪ್ಪ, ಎ.ಕೆ.ಬುಳ್ಳಪ್ಪ, ಅಂಜಿನಪ್ಪ, ಟಿ.ಅರ್ಜುನ, ಮಾದೂರು ಕೆ.ಮಹೇಶ್ವರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net