ಮೌಲಾನಾ ಆಜಾದ್ ಶಾಲೆ ಬೇರೆಡೆ ನಿರ್ಮಿಸಿ

ಕಂಪ್ಲಿ ಸಕ್ಕರೆ ಕಾರ್ಖಾನೆ ಪ್ರದೇಶದ ಸಹಿಪ್ರಾ ಶಾಲೆ ಆವರಣದಲ್ಲಿ ಮೌಲಾನಾ ಅಜಾದ್ ಶಾಲೆ ಕಟ್ಟಡ ನಿರ್ಮಾಣ ಸ್ಥಳಕ್ಕೆ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯೆ ಡಾ.ಅರುಣಾ ಕಾಮಿನೇನಿ ಭೇಟಿ ನೀಡಿದ್ದರು.
ಕಂಪ್ಲಿ ಸಕ್ಕರೆ ಕಾರ್ಖಾನೆ ಪ್ರದೇಶದ ಸಹಿಪ್ರಾ ಶಾಲೆ ಆವರಣದಲ್ಲಿ ಮೌಲಾನಾ ಅಜಾದ್ ಶಾಲೆ ಕಟ್ಟಡ ನಿರ್ಮಾಣ ಸ್ಥಳಕ್ಕೆ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯೆ ಡಾ.ಅರುಣಾ ಕಾಮಿನೇನಿ ಭೇಟಿ ನೀಡಿದ್ದರು.
Published on
ಕಂಪ್ಲಿ: ಪಟ್ಟಣದ ಸಕ್ಕರೆ ಕಾರ್ಖಾನೆ ಪ್ರದೇಶದ ಸಹಿಪ್ರಾ ಶಾಲೆ ಆವರಣದಲ್ಲಿ ಮೌಲಾನಾ ಆಜಾದ್ ಮಾದರಿ ಶಾಲೆ ಕಟ್ಟಡ ನಿರ್ಮಾಣ ಸ್ಥಳಕ್ಕೆ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯೆ ಡಾ.ಅರುಣಾ ಕಾಮಿನೇನಿ ಬುಧವಾರ ಭೇಟಿ ನೀಡಿದ್ದರು.
ಸ್ಥಳೀಯ ಶಾಸಕ ಸ್ಥಳ ಪರಿಶೀಲಿಸಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಬೇಕು. ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ಆರೋಗ್ಯ, ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಹಿತದೃಷ್ಟಿಯಿಂದ ಪ್ರಸ್ತುತ ಜಾಗದಲ್ಲಿ ಮೌಲಾನಾ ಆಜಾದ್ ಮಾದರಿ ಶಾಲೆ ಕಟ್ಟಡ ನಿರ್ಮಿಸಬಾರದು. ನಿಯಮ ಪಾಲಿಸುವಲ್ಲಿ ಸರ್ಕಾರ ಎಡವಬಾರದು ಎಂದು ಒತ್ತಾಯಿಸಿದರು.
ಮುಖಂಡ ಚಿಗುರುಪಾಟಿ ರಾಮಬಸವೇಶ್ವರರಾವು, ಪುರಸಭೆ ಮಾಜಿ ಸದಸ್ಯ ಟಿ.ವಿ.ಸುದರ್ಶನರೆಡ್ಡಿ, ರಬಿಯಾ ಟಿ.ನಿಸಾರ್, ಮತ್ತಿತರರು ಮಾತನಾಡಿ, ಪಿಯುಸಿ ಮತ್ತು ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಬೇರೆಡೆ ತೆರಳಬೇಕಾಗಿರುವುದರಿಂದ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ತೊಂದರೆಯಾಗುತ್ತಿದೆ. ಇಂತಹ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಮುಂದಾಗಬೇಕು. ಮೌಲಾನಾ ಆಜಾದ್ ಶಾಲೆ ಸ್ಥಳಾಂತರಿಸಲು ಶಾಸಕರು ಮುಂದಾಗಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ಸ್ಥಳದಲ್ಲಿದ್ದ ಪಾಲಕರು ಮಕ್ಕಳ ಆಟೋಟಕ್ಕೆ ಮೈದಾನ ಬೇಕು. ಇಲ್ಲಿ ಮೌಲಾನಾ ಆಜಾದ್ ಶಾಲೆ ಕಟ್ಟಡ ನಿರ್ಮಿಸಬಾರದು ಎಂದು ಒತ್ತಾಯಿಸಿದರು. ಪ್ರಮುಖರಾದ ಎನ್.ಮನೋಜಗೌಡ, ಶೇಖರ್, ರಾಮಲಿಂಗಪ್ಪ, ಹೊನ್ನೂರಸ್ವಾಮಿ, ಸ್ಥಳೀಯ ನಿವಾಸಿಗಳಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net