ಆಯವ್ಯಯದಲ್ಲಿ 101.79 ಕೋಟಿ ರೂ. ಆರಂಭ ಶಿಲ್ಕು, 258.36 ಕೋಟಿ ಆದಾಯ ಸೇರಿ 264.12 ಕೋಟಿ ವೆಚ್ಚದ ಬಜೆಟ್ ಇದಾಗಿದೆ. ಪ್ರಸಕ್ತ 2026-27ನೇ ಸಾಲಿನ ರಾಜಸ್ವ ಆದಾಯಗಳಲ್ಲಿ ಪಾಲಿಕೆ ನೌಕರರ ವೇತನ 35.15 ಕೋಟಿ, ಎಸ್‌ಎಫ್‌ಸಿ ವಿದ್ಯುತ್ ಶುಲ್ಕ 32.34 ಕೊಟಿ ನೇರನೇಮಕಾತಿ ಪೌರ ಕಾರ್ಮಿಕರ ವೇತನ 8 ಕೋಟಿ, ಆಸ್ತಿ ತೆರಿಗೆ 50 ಕೋಟಿ, ನೀರಿನ ತೆರಿಗೆ 19.10 ಕೋಟಿ, ಕೊಳಚೆ ನೀರು ಸರಬರಾಜು ಶುಲ್ಕ 3.56 ಕೊಟಿ, ಕಟ್ಟಡ ನಿಯಂತ್ರಣಕ್ಕೆ ಸಂಬಂಧಿಸಿದ ಶುಲ್ಕ 2.20 ಕೋಟಿ, ಇತರೆ ಪರವಾನಿಗೆ ಶುಲ್ಕಗಳು 1 ಕೋಟಿ, ಘನತ್ಯಾಜ್ಯ ವಸ್ತು ನಿರ್ವಹಣೆ ಶುಲ್ಕ 4.20 ಕೋಟಿ ಮತ್ತು ಇತರೆ ರಾಜಸ್ವ ಆದಾಯಗಳು ಸೇರಿ ಒಟ್ಟು 176.24 ಕೋಟಿ, ವಿವಿಧ ಅನುದಾನಗಳ ಬಂಡವಾಳ ಆದಾಯಗಳು 81.97 ಕೋಟಿ ಸೇರಿ ಒಟ್ಟು 258.36 ಕೋಟಿ ರೂ.ಗಳ ಬಜೆಟ್ ಇದಾಗಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಿದರು.