ಲೋಕಾಯುಕ್ತ ಬಲೆಗೆ ಬುಡಾ ಸರ್ವೇಯರ್

ಶಾಂತಮೂರ್ತಿ
ಶಾಂತಮೂರ್ತಿ
Published on

ಪ್ರಮುಖ ಮುಖ್ಯಾಂಶಗಳು

  • ಬಡಾವಣೆ ಅನುಮೋದನೆಗೆ ಲಂಚ ಬೇಡಿಕೆ
  • ಬಡಾವಣೆಯ ಅಭಿವೃದ್ದಿಗಾಗಿ ಅನುಮೋದನೆ
ಬಳ್ಳಾರಿ : ನಗರದ ಬಡಾವಣೆಯ ವಿನ್ಯಾಸ ಯೋಜನೆಯ ಅಭಿವೃದ್ಧಿಗೆ ಅನುಮೋದನೆ ನೀಡಲು 3.50 ಲಕ್ಷ ರೂ. ಲಂಚ ಪಡೆಯುತ್ತಿದ್ದ ವೇಳೆ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ) ಸರ್ವೇಯರ್ ಶಾಂತಮೂರ್ತಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಇಲ್ಲಿನ ನಿವಾಸಿ ವೀರೇಶ್ ಎಂಬುವವರಿಂದ ಸಲ್ಲಿಕೆಯಾಗಿದ್ದ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿದರು. ಬಡಾವಣೆಯ ಅಭಿವೃದ್ದಿಗಾಗಿ ಅನುಮೋದನೆ ನೀಡಲು ಶಾಂತಮೂರ್ತಿ ಹಣ ಬೇಡಿಕೆಯಿಟ್ಟಿದ್ದಾರೆ ಎಂಬುದಾಗಿ ದೂರಿನಲ್ಲಿ ಆರೋಪಿಸಲಾಗಿತ್ತು.
ಸರ್ವೇಯರ್ ಶಾಂತಮೂರ್ತಿ ಪರವಾಗಿ ಬುಡಾ ಸಿಬ್ಬಂದಿ ಮೊಹಮ್ಮದ್ ಸಾಜೀದ್ ಎಂಬುವವ ದೂರದಾರರಿಂದ ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
==
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net