ಡಾಂಬರ್ ಕಾಣದ ಗಡಿ ರಸ್ತೆಗಳು

ಜಗಳೂರು ಕ್ಷೇತ್ರಕ್ಕೊಳಪಡುವ ಗೌಳೇರಹಟ್ಟಿ ಗ್ರಾಮದಿಂದ ನಾಗತಿಕಟ್ಟೆಗೆ ಸಂಪರ್ಕಿಸುವ ರಸ್ತೆ ಹದಗೆಟ್ಟಿರುವುದು.
ಜಗಳೂರು ಕ್ಷೇತ್ರಕ್ಕೊಳಪಡುವ ಗೌಳೇರಹಟ್ಟಿ ಗ್ರಾಮದಿಂದ ನಾಗತಿಕಟ್ಟೆಗೆ ಸಂಪರ್ಕಿಸುವ ರಸ್ತೆ ಹದಗೆಟ್ಟಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ವಾಹನ ಸವಾರರ ಪರದಾಟ
  • ನಾಗತಿಕಟ್ಟೆಗೆ ಸಂಪರ್ಕಿಸುವ ರಸ್ತೆ
  • ರೈತರು ಮಾರುಕಟ್ಟೆಗೆ ಹೋಗಲು ಈ ಮಾರ್ಗ ಅವಲಂಬಿne
ಬಿ.ವೈ.ದುರುಗೇಶ ಬಾಗಳಿ 
ಹರಪನಹಳ್ಳಿ: ವಿಜಯನಗರ-ದಾವಣಗೆರೆ ಜಿಲ್ಲೆ ಗಡಿ ಭಾಗದಲ್ಲಿರುವ ತಾಲೂಕಿನ ಬಹುತೇಕ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ದಶಕಗಳಿಂದ ಡಾಂಬರ್ ಕಾಣದೆ ಪ್ರಯಾಣಿಕರು ಕೈಯಲ್ಲಿ ಜೀವ ಹಿಡಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅರೆಬಸಾಪುರ ಗ್ರಾಮದಿಂದ ದಾವಣಗೆರೆ-ಹರಪನಹಳ್ಳಿ ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಆಳವಾದ ಗುಂಡಿಗಳು ಬಿದ್ದಿವೆ. ಮಳೆ ಬಂದಾಗ ಗುಂಡಿಗಳಲ್ಲಿ ನೀರು ನಿಲ್ಲುವುದರಿಂದ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ರಸ್ತೆ ಪಕ್ಕದಲ್ಲಿ ಕಿರು ಕಾಲುವೆ ಹಾದು ಹೋಗಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. 
ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಅರೆ ಬಸಾಪುರ ಗ್ರಾಮದ ರೈತರು ಮಾರುಕಟ್ಟೆಗೆ ಹೋಗಲು ಈ ಮಾರ್ಗವನ್ನೇ ಅವಲಂಬಿಸಿದ್ದಾರೆ. ಆದರೆ, ವಾಹನಗಳು ಸರಾಗವಾಗಿ ಸಾಗದಿರುವುದರಿಂದ ಹಿರೇಮೇಗಳಗೇರಿ ಮೂಲಕ ತೆರಳುವ ಅನಿವಾರ್ಯತೆಯಿದೆ. 
ಉಚ್ಚಂಗಿದುರ್ಗ ಮೂಲಕ ದಾವಣಗೆರೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಹೋಗುವ ಪ್ರಯಾಣಿಕರ ಗೋಳು ಹೇಳತೀರದಾಗಿದೆ. ಬೇವಿನಹಳ್ಳಿ-ನಾಗತಿಕಟ್ಟೆ-ದಾವಣಗೆರೆ ರಸ್ತೆ ಮಳೆ ಬಂದಾಗ ಕೆಸರು ಗದ್ದೆಯಂತಾಗುತ್ತದೆ. ಗೌಳೇರಹಟ್ಟಿ-ಪೋತಲಕಟ್ಟೆ-ದಾವಣಗೆರೆ ರಸ್ತೆ ಡಾಂಬರೀಕರಣಗೊಂಡು ಮೂರು ದಶಕಗಳಿಗೂ ಅಧಿಕ ಕಾಲವಾಗಿದ್ದು, ಕೊಂಚವೂ ದುರಸ್ತಿಯಾಗಿಲ್ಲ, ಲಾರಿ, ಟ್ರ್ಯಾಕ್ಟರ್‌ಗಳಲ್ಲಿ ಜಲ್ಲಿಕಲ್ಲು ಸಾಗಣೆ ಯಥೇಚ್ಛವಾಗಿ ನಡೆಯುವುದರಿಂದ ರಸ್ತೆಗಳ ಚಹರೆಯೇ ಬದಲಾಗಿದೆ. 
ಗುಂಡಿಗಳೇ ಇರುವ ರಸ್ತೆಯಲ್ಲಿ ಸಂಚರಿಸುವ ಬಸ್‌ಗಳ ಪ್ರಯಾಣಿಕರು ಹೈರಾಣಾಗಿದ್ದಾರೆ. ದಾರಿಯಲ್ಲಿ ವಾಹನ ಕೆಟ್ಟು ನಿಂತು ಸಮಸ್ಯೆ ಅನುಭವಿಸುತ್ತಿದ್ದಾರೆ. ಜಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಹರಪನಹಳ್ಳಿ ತಾಲೂಕಿನ ಏಳು ಗ್ರಾಪಂ ಜನರಿಗೆ ಅಭಿವೃದ್ಧಿಯಲ್ಲಿ ತಾರತಮ್ಯ ಧೋರಣೆ ಆಗುತ್ತಿರುವ ಮಾತುಗಳು ಕೇಳಿಬಂದಿವೆ.
11 ಕೋಟಿ ರೂ. ಬಿಡುಗಡೆಯಾಗಿದ್ದು, ಈ ಕುರಿತು ಮಂಡಳಿಯ ಗಮನಕ್ಕೆ ತರಲಾಗಿದೆ. ಹೆಚ್ಚಿನ ಅನುದಾನದ ನಿರೀಕ್ಷೆ ಯಿದೆ. ಜಗಳೂರು ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಹರಪನಹಳ್ಳಿ ತಾಲೂಕಿನ ಏಳು ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಗೆ ಬದ್ಧನಾಗಿರುವೆ. 
 ಬಿ.ದೇವೇಂದ್ರಪ್ಪ ಶಾಸಕ, ಜಗಳೂರು
"

ಜಗಳೂರು ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಹರಪನಹಳ್ಳಿ ತಾ ಲೂಕಿನ ಹಳ್ಳಿಗಳ ಸುತ್ತ ಹೇರಳವಾಗಿ ಗಣಿಗಾರಿಕೆ ನಡೆಯುತ್ತಿದೆ. ಇದರಿಂದ ಭಾರಿ ವಾಹನಗಳು ಸಂಚರಿಸಿ ರಸ್ತೆಗಳು ಹದಗೆಟ್ಟಿವೆ. ಗುಂಡಿಗಳಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಸಂಬಂಧಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಭಾಗದ ಅಭಿವೃದ್ಧಿಗೆ ಮುಂದಾಗಬೇಕಿದೆ.

ಜಗಳೂರು ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಹರಪನಹಳ್ಳಿ ತಾ ಲೂಕಿನ ಹಳ್ಳಿಗಳ ಸುತ್ತ ಹೇರಳವಾಗಿ ಗಣಿಗಾರಿಕೆ ನಡೆಯುತ್ತಿದೆ. ಇದರಿಂದ ಭಾರಿ ವಾಹನಗಳು ಸಂಚರಿಸಿ ರಸ್ತೆಗಳು ಹದಗೆಟ್ಟಿವೆ. ಗುಂಡಿಗಳಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಸಂಬಂಧಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಭಾಗದ ಅಭಿವೃದ್ಧಿಗೆ ಮುಂದಾಗಬೇಕಿದೆ.

ಬೇವಿನಹಳ್ಳಿ ಕ್ರಾಸ್‌ನಿಂದ ಗೌಳೇರಹಟ್ಟಿ-ಚಿಕ್ಕಮೇಗಳಗೇರಿ ಮೂಲಕ ದಾವಣಗೆರೆ ಸಂಪರ್ಕಿಸುವ ರಸ್ತೆ ಹಾಳಾಗಿರುವುದು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net