ಖರ್ಗೆ ಹೇಳಿಕೆ ವಿರುದ್ದ ಬಿಜೆಪಿ ಪ್ರತಿಭಟನೆ

ಬಳ್ಳಾರಿಯ ಕನಕದಾಸ ವೃತ್ತದ ಬಳಿ ಎಐಸಿಸಿ ಮಲ್ಲಿಕಾರ್ಜುನ ಪ್ರಧಾನಿ ಮೋದಿ ಅವರ ವಿರುದ್ಧ ಹೇಳಿಕೆ ಖಂಡಿಸಿ, ಜಿಲ್ಲಾ ಬಿಜೆಪಿ ಘಟಕದಿಂದ ಪ್ರತಿಭಟನೆ ನಡೆಯಿತು. ಮಾಜಿ ಶಾಸಕ ಜಿ.ಸೋಮಶೇಖರರೆಡ್ಡಿ, ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್, ಪದಾಧಿಕಾರಿಗಳಾದ ಡಾ.ಎಸ್.ಜೆ.ವಿ.ಮಹಿಪಾಲ್, ವೆಂಕಟರಮಣ,  ದರಪ್ಪ ನಾಯಕ, ಮಲ್ಲನಗೌಡ, ಪುಷ್ಪಾಲತಾ, ಸೌಮ್ಯ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಪ್ರತಿಭಟನೆ
ಬಳ್ಳಾರಿ : ಪ್ರಧಾನಿ ನರೇಂದ್ರ ಮೋದಿ ಅವರನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಯೋತ್ಪಾದಕ ಎಂಬ ಹೇಳಿಕೆ ಖಂಡಿಸಿ, ಬಿಜೆಪಿ ಜಿಲ್ಲಾ ಘಟಕದಿಂದ ಕಾಂಗ್ರೆಸ್ ಕಚೇರಿಗೆ ಮುತ್ತಿಗೆಗೆ ಯತ್ನಿಸಿದ ವೇಳೆ ಪೊಲೀಸರು ಬಂಧಿಸಿ, ಬಿಡುಗಡೆಗೊಳಿಸಿದರು.
ನಗರದ ಕುಮಾರ ಸ್ವಾಮಿ ವೃತ್ತದ ಬಳಿ ಬಿಜೆಪಿ ಕಾರ್ಯಕರ್ತರು ಖರ್ಗೆ ವಿರುದ್ಧ ವಾಗ್ದಳಿಯ ಫಲಕಗಳನ್ನು ಹಿಡಿದು, ಘೋಷಣೆ ಕೂಗಿ ಅಕ್ರೋಶ ಹೊರಹಾಕಿದರು. ಮುತ್ತಿಗೆ ಯತ್ನದ ವೇಳೆ ಬಿಜೆಪಿ ಪದಾಧಿಕಾರಿಗಳು ಹಾಗೂ ಪೊಲೀಸರಿಗೆ ಮಾತಿನ ಚಕಮಕಿಯಿಂದ ಕೆಲ ಕಾಲ ವಾಗ್ವಾದ ನಡೆಯಿತು.
ಮಾಜಿ ಶಾಸಕ ಜಿ.ಸೋಮಶೇಖರರೆಡ್ಡಿ ಮಾತನಾಡಿ, ಪ್ರಧಾನಿ ಮೋದಿ ಅವರು ವಿಶ್ವ ಮೆಚ್ಚುವಂತೆ ಆಡಳಿತ ನೀಡಿ ಭಾರತವನ್ನು ವಿಶ್ವ ಮಟ್ಟದಲ್ಲಿ ಘನತೆ ಹೆಚ್ಚುವಂತೆ ಮಾಡಿದ್ದಾರೆ. ವಿಶ್ವವೇ ಮೋದಿ ಅವರ ನಾಯಕತ್ವ ಒಪ್ಪಿಕೊಂಡಿದೆ. ಆದರೆ, ಕಾಂಗ್ರೆಸ್ ನಾಯಕರು ಮಾತ್ರ ಒಪ್ಪುತ್ತಿಲ್ಲ. ಇದೊಂದು ದುರದೃಷ್ಟಕರ ವಿಷಯವಾಗಿದೆ. ಮೋದಿ ಅವರನ್ನು ಖರ್ಗೆ ಅವರು ಭಯೋತ್ಪದಾಕ ಎಂದು ಕರೆದಿರುವ ಬಗ್ಗೆ ಕ್ಷಮೆಯಾಚಿಸಬೇಕು. ಕೇವಲ ಮೋದಿ ಅವರಿಗೆ ಮಾತ್ರವಲ್ಲದೇ ದೇಶದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀತ್ ಮಾತನಾಡಿ, ಕಾಂಗ್ರೆಸ್ ನಾಯಕರಿಂದ ಪ್ರಧಾನಿ ಮೋದಿ ಅವರ ಬಗ್ಗೆ ಬಳಸುವ ಅಸಂವಿಧಾನಿಕ ಪದಗಳಿಂದ ಅವರ ಸಂಸ್ಕೃತಿ ಏನು ಎಂಬುದು ತೋರಿಸುತ್ತಿದೆ ಎಂದು ವಾಗ್ದಳಿ ನಡೆಸಿದರು.
===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net