ಸೆ.1ರಿಂದ ಕಾಂಗ್ರೆಸ್ ವಿರುದ್ಧ ಬಿಜೆಪಿ ಪಾದಯಾತ್ರೆ

ಕಂಪ್ಲಿಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜೀವ್ ಪಾದಯಾತ್ರೆ ರೂಟ್ ಕುರಿತು ಚರ್ಚಿಸಿದರು. ಪ್ರಮುಖರಾದ ಅಮರನಾಥ ಪಾಟೀಲ್, ಶರಣು ತಳ್ಳಿಕೇರಿ, ಅಳ್ಳಳ್ಳಿ ವೀರೇಶ್, ಗೊರ್ತಿ ಶ್ರೀನಿವಾಸ್, ಡಿ.ಶ್ರೀಧರಶ್ರೇಷ್ಠಿ, ಸಿ.ಎ.ಚನ್ನಪ್ಪ ಇತರರಿದ್ದರು.
ಕಂಪ್ಲಿಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜೀವ್ ಪಾದಯಾತ್ರೆ ರೂಟ್ ಕುರಿತು ಚರ್ಚಿಸಿದರು. ಪ್ರಮುಖರಾದ ಅಮರನಾಥ ಪಾಟೀಲ್, ಶರಣು ತಳ್ಳಿಕೇರಿ, ಅಳ್ಳಳ್ಳಿ ವೀರೇಶ್, ಗೊರ್ತಿ ಶ್ರೀನಿವಾಸ್, ಡಿ.ಶ್ರೀಧರಶ್ರೇಷ್ಠಿ, ಸಿ.ಎ.ಚನ್ನಪ್ಪ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜೀವ್ ಹೇಳಿಕೆ

ಕಂಪ್ಲಿ: ಸಚಿವ ನಾಗೇಂದ್ರ ರಾಜೀನಾಮೆ ಕೊಟ್ಟರೂ ಪಾದಯಾತ್ರೆ ನಿಲ್ಲಲ್ಲ. ಕಾಂಗ್ರೆಸ್ ವೈಫಲ್ಯಗಳ ವಿರುದ್ಧ, ಚುನಾವಣಾ ಭರವಸೆಗಳ ಈಡೇರಿಕೆಗೆ ಆಗ್ರಹಿಸಿ ಪಾದಯಾತ್ರೆ ನಡೆಸುತ್ತೇವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜೀವ್ ಹೇಳಿದರು.

ವಾಲ್ಮೀಕಿ ಹಗರಣ ವಿರುದ್ಧ ಹಮ್ಮಿಕೊಂಡ ಪಾದಯಾತ್ರೆಗಾಗಿ ಗುರುವಾರ ಕಲ್ಮಠದ ಬಳಿ ರೂಟ್‌ಮ್ಯಾಪ್ ವೀಕ್ಷಿಸಿ ಮಾತನಾದರು. ವಾಲ್ಮೀಕಿ ಸಮುದಾಯದ ಯುವಕರು, ಮಹಿಳೆಯರು, ವಿಧವೆಯರು ಬದುಕು ಕೊಟ್ಟಿಕೊಳ್ಳಲು ಬಳಕೆ ಆಗಬೇಕಿದ್ದ ನಿಗಮದ 187ಕೋಟಿ ರೂ. ಸಚಿವ ನಾಗೇಂದ್ರ ಸೇರಿ ಇತರರು ಲುಂಬಿರ್ಗಿನಿ ಕಾರು, ಚಿನ್ನದ ಬಿಸ್ಕೇಟ್ ಕೊಳ್ಳಲು, ಉಜ್ಜಿನಿ ಟೂರ್ ಮಾಡಲು ಬಳಸಿ ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯ ಎಸಗಿದ್ದಾರೆ. ಅಧಿವೇಶನದ 3 ದಿನದೊಳಗೆ ನಾಗೇಂದ್ರ ರಾಜಿನಾಮೆ ಪಡೆದು 3 ದಿನ ಚರ್ಚೆಗೆ ಅವಕಾಶ ಮಾಡಿಕೊಡದೆ ಸದನವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿ ಕಾಂಗ್ರೆಸ್ ಬಂಡತನ ಪ್ರದರ್ಶಿಸಿದೆ.
ಸಚಿವ ರಾಜೀನಾಮೆ ಕೊಟ್ಟರೆ ನ್ಯಾಯ ಸಿಕ್ಕಂತಾಗುತ್ತದೆಯೇ? 187ಕೋಟಿ ರೂ. ಎಲ್ಲಿಗೆ ಹೋಯಿತು? ನಿಗಮಕ್ಕೆ ಹಣ ಇನ್ನೂ ವಾಪಸ್ಸು ಬಂದಿಲ್ಲ. ಚುನಾವಣಾ ಪ್ರಣಾಳಿಕೆಯಂತೆ ತುಂಗಭದ್ರಾ ಜಲಾಶಯದ ಹೂಳೆತ್ತಿ 200ಟಿಎಂಸಿ ನೀರು ಉಳಿಸುವ ಮಾತು ಮರೆತ ಕಾಂಗ್ರೆಸ್ ವಚನಭ್ರಷ್ಟವಾಗಿದೆ. ನವಲಿ ಸಮಾಂತರ ಜಲಾಶಯ, ಬರಗಾಲ ಘೋಷಣೆ ಸೇರಿ ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸರ್ಕಾರದ ವೈಫಲ್ಯಗಳ ವಿರುದ್ಧ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಸೆ.1ರಿಂದ ಪಾದಯಾತ್ರೆ ಆರಂಭಿಸಲಾಗುವುದು. ಸಚಿವ ನಾಗೇಂದ್ರ ರಾಜೀನಾಮೆ ಪಡೆಯುವಲ್ಲಿ ಕಾಂಗ್ರೆಸ್ ಬಂಡತನ ತೋರಿಸಿದರೆ ವಾಲ್ಮೀಕಿ ಸಮುದಾಯ ಕಾಂಗ್ರೆಸ್ ಸರ್ಕಾರವನ್ನು ಒಂಟಿ ಕಾಲಲ್ಲಿ ನಿಲ್ಲಿಸಲಿದ್ದು, ಸಮುದಾಯದ ಮಧ್ಯದಲ್ಲಿ ಕಾಲಿಡಲು ಅವಕಾಶ ಕೊಡದು ಎಂದರು.
ಬಿಜೆಪಿ ವಿಭಾಗೀಯ ಪ್ರಭಾರಿ ಅಮರನಾಥ ಪಾಟೀಲ್, ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ರಾಜ್ಯ ಕಾರ್ಯದರ್ಶಿ ತಮ್ಮೇಶಗೌಡ, ಜಿಲ್ಲಾ ಪ್ರಧಾನಕಾರ್ಯದರ್ಶಿ ಅಡವಿಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಅಳ್ಳಳ್ಳಿ ವೀರೇಶ್, ಪ್ರಮುಖರಾದ ಗೊರ್ತಿ ಶ್ರೀನಿವಾಸ್, ಪ್ರಶಾಂತ್, ಚಂದ್ರಕಾಂತರೆಡ್ಡಿ, ಟಿ.ವಿ.ಸುದರ್ಶನರೆಡ್ಡಿ, ವೈಮುರುಳಿಮೋಹನರೆಡ್ಡಿ, ಸಿ.ಎ.ಚನ್ನಪ್ಪ, ಡಿ.ಶ್ರೀಧರಶ್ರೇಷ್ಠಿ, ಕರಿಬಸಯ್ಯಸ್ವಾಮಿ, ಷಂಶುದ್ದೀನ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net