

ಪ್ರಮುಖ ಮುಖ್ಯಾಂಶಗಳು
ಸಂಡೂರು: ಅನೇಕ ಮಹನೀಯರು ಪ್ರಾಣ, ಆಸ್ತಿ ತ್ಯಾಗ ಮಾಡಿದ್ದರ ಫಲವಾಗಿ ಸ್ವಾತಂತ್ರ್ಯ ಲಭಿಸಿದೆ ಎಂದು ಶಾಸಕಿ ಅನ್ನಪೂರ್ಣ ತುಕಾರಾಮ್ ಹೇಳಿದರು.
ಶನಿವಾರ 80ನೇ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಂಗವಿಕಲರಿಗೆ ಸೈಕಲ್ ವಿತರಿಸಲಾಯಿತು. ನಿವೃತ್ತ ಸೈನಿಕರು ಹಾಗೂ ಶಿಕ್ಷಕರನ್ನು ಸನ್ಮಾನಿಸಲಾಯಿತು.
ತಾಪಂ ಇಒ ಮಡಗಿನ ಬಸಪ್ಪ, ಬಿಇಒ ಡಾ.ಐ.ಆರ್.ಅಕ್ಕಿ, ಮುಖ್ಯಾಧಿಕಾರಿ ಬಿ.ವಿನಯಕುಮಾರ್ ಗೌಡ, ಸಿಪಿಐ ಮಹೇಶ್‌ಗೌಡ, ವಾಡಾ ಅಧ್ಯಕ್ಷ ಅಕ್ಷಯ ಲಾಡ್, ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ನೂರುದ್ದೀನ್, ಜಿಲ್ಲಾ ಉಪಾಧ್ಯಕ್ಷೆ ಆಶಾಲತಾ ಸೋಮಪ್ಪ ಇತರರಿದ್ದರು.