ಕಳೆದ ಎರಡು ದಿನಗಳಿಂದ ದುಬೈನಲ್ಲಿ ಉಳಿದುಕೊಂಡಿರುವ ಭರತರರೆಡ್ಡಿಗೆ ಹಿತೈಷಿಗಳು ಮತ್ತು ಸ್ನೇಹಿತರು ಆತಂಕ ವ್ಯಕ್ತಪಡಿಸಿ ಕರೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಅವರು, ನಾನು ಮತ್ತು ನನ್ನ ಕುಟುಂಬದವರು ಸುರಕ್ಷಿತವಾಗಿದ್ದೇವೆ. ಯಾರೂ ಆತಂಕಪಡುವ ಅಗತ್ಯವಿಲ್ಲ. ಜಿಲ್ಲೆಯಿಂದ ದುಬೈ ಪ್ರವಾಸಕ್ಕೆ ಬಂದಿದ್ದ 35 ಜನರು ಸಂಪೂರ್ಣ ಸುರಕ್ಷಿತವಾಗಿದ್ದು, ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಪ್ರವಾಸಿಗರಿಗೆ ಅಗತ್ಯವಿರುವ ಸೌಲಭ್ಯ ಒದಗಿಸಲು ದುಬೈನಲ್ಲಿರುವ ತಮ್ಮ ಕಚೇರಿಯ ಸಿಬ್ಬಂದಿ ನಿಯೋಜಿಸಲಾಗಿದೆ. ರಾಜ್ಯ ಸರ್ಕಾರದ ವತಿಯಿಂದ 35 ಪ್ರವಾಸಿಗರ ಪಟ್ಟಿಯನ್ನು ಈಗಾಗಲೇ ಭಾರತೀಯ ರಾಯಭಾರಿ ಕಚೇರಿಗೆ ಸಲ್ಲಿಸಲಾಗಿದೆ. ದುಬೈ ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನರಾರಂಭಗೊಂಡಪ್ರವಾಸಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಶೀಘ್ರದಲ್ಲೇ ಎಲ್ಲರೂ ತವರಿಗೆ ಮರಳಲಿದ್ದಾರೆ ಎಂದು ಹೇಳುತ್ತಾ ‘ ಜೈ ಹಿಂದ್, ಜೈ ಕರ್ನಾಟಕ’ ಎಂಬುದಾಗಿ ಹೇಳಿ ಮಾತು ಮುಕ್ತಾಯಗೊಳಿಸಿದ್ದಾರೆ.