ಬಿಜಿಎಂ ಚಿತ್ರೀಕರಣ ಆರಂಭ

ರಮೇಶ ಭೀಮರಾಯಪ್ಪ
ರಮೇಶ ಭೀಮರಾಯಪ್ಪ
Published on

ಪ್ರಮುಖ ಮುಖ್ಯಾಂಶಗಳು

  • ವಿವಾಹ
ಬಳ್ಳಾರಿ : ಪ್ರಸ್ತುತ ದಿನಗಳಲ್ಲಿ ರಿಜಿಸ್ಟರ್ ಹಾಗೂ ಪ್ರೇಮ ವಿವಾಹಗಳ ಅಬ್ಬರ ಜೋರಾಗಿದೆ. ಆದರೆ, ಬಿಜಿಎಂ ( ಬ್ಯಾಕ್ ಗ್ರೌಂಡ್ ಮ್ಯಾರೇಜ್)ಚಿತ್ರವು ಹಳೆಯ ಸಂಪ್ರದಾಯದ ದಂತೆ ಹಿರಿಯರು ನಿಶ್ಚಯಿಸುವ ಮದುವೆ ಕುರಿತು ಬೆಳಕು ಚೆಲ್ಲಲಿದೆ ಎಂದು ನಿರ್ದೇಶಕ ರಮೇಶ ಭೀಮರಾಯಪ್ಪ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಗರದ ಕನಕ ದುರ್ಗಮ್ಮ ದೇವಸ್ಥಾನದ ಆವರಣದಲ್ಲಿ ಚಿತ್ರೀಕರಣಕ್ಕೆ ಚಾಲನೆ ನೀಡಲಾಗಿದೆ. ಮುಂದಿನ 25 ದಿನಗಳ ಕಾಲ ಜಿಲ್ಲಾದ್ಯಂತ ನಾನಾ ಕಡೆ ಹಾಗೂ ಬೆಂಗಳೂರಿನಲ್ಲಿ ಸಿನಿಮಾದ ಚಿತ್ರೀಕರಣ ನಡೆಯಲಿದೆ ಎಂದರು.
ಇದೊಂದು ಸುಂದರ ತ್ರಿಕೋನ ಪ್ರೇಮ ಕಥೆಯಾಗಿದ್ದು, ಸಂಪ್ರದಾಯಬದ್ಧ ಮದುವೆಯ ಸೌಂದರ್ಯ ಮತ್ತು ಅದರಿಂದ ಸಿಗುವ ಸುಖ-ಸಂತೋಷಗಳನ್ನು ಸಿನಿಮಾ ಒಳಗೊಂಡಿದೆ. ಕೆಜಿಎಫ್ ಖ್ಯಾತಿಯ ಕಿನ್ನಾಳ್ ರಾಜ್ ಅವರು ಈ ಚಿತ್ರಕ್ಕೆ ಸಂಭಾಷಣೆ, ಚಿತ್ರಕಥೆ ಹಾಗೂ ಸಾಹಿತ್ಯದ ಜವಾಬ್ದಾರಿ ಹೊತ್ತುಕೊಂಡಿರುವುದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಬೆಂಗಳೂರಿನ ನಿವಾಸಿಗಳಾದ ಮಲ್ಲಿಕಾರ್ಜುನ ಮತ್ತು ದಿನೇಶ್ ಇಬ್ಬರು ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದು, ಕಿರುತೆರೆ ಖ್ಯಾತಿಯ ನಟಿ ಕೊಟ್ಟೂರಿನ ಪೂಜಾ ನಾಯಕಿಯಾಗಿ ಅಭಿನಯಸುತ್ತಿದ್ದಾರೆ. ಶ್ರೀ ಚಕ್ರ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ಅದ್ಧೂರಿಯಾಗಿ ನಿರ್ಮಾಣಗೊಳ್ಳುತ್ತಿದೆ. ನಮ್ಮ ಮಣ್ಣಿನ ಸಂಪ್ರದಾಯದ ಮದುವೆಗಳ ಮಹತ್ವವನ್ನು ಇಂದಿನ ಪೀಳಿಗೆಗೆ ತಿಳಿಸುವುದು ಈ ಸಿನಿಮಾದ ಮೂಲ ಉದ್ದೇಶ. ಎಲ್ಲ ಕೆಲಸಗಳನ್ನು ಮುಗಿಸಿ ಬರುವ 2026ರ ಆಗಸ್ಟ್ ತಿಂಗಳಲ್ಲಿ ಸಿನಿಮಾ ತೆರೆಯ ಮೇಲೆ ತರಲು ಸಿದ್ಧತೆ ನಡೆಸಲಾಗುವುದು ಎಂದರು.
====
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net