ಬಳ್ಳಾರಿ ರಾಘವ ರಂಗಭೂಮಿಯ ಸಾರ್ವಭೌಮ

ಬಳ್ಳಾರಿಯ ರಾಘವ ಕಲಾಮಂದಿರದಲ್ಲಿ ಆಯೋಜಿಸಿದ್ದ  ಬಳ್ಳಾರಿ ರಾಘವ ಜಯಂತಿ ಕಾರ್ಯಕ್ರಮದಲ್ಲಿ ಸಿಕಿಂದ್ರಬಾದ್‌ನ ಶ್ರೀವಲ್ಲೂರು ಶ್ರೀಹರಿರಾವ್ ಅವರಿಗೆ ‘ಬಳ್ಳಾರಿ ರಾಘವ ರಾಜ್ಯ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಸಂಘದ ಅಧ್ಯಕ್ಷ ಕೆ.ಕೋಟೇಶ್ವರರಾವ್, ಪದಾಧಿಕಾರಿಗಳಾದ ಕೆ.ಚನ್ನಪ್ಪ, ಎಚ್.ವಿಷ್ಣುವರ್ಧನರೆಡ್ಡಿ, ಬಾಣಾಪುರ ರಮೇಶಗೌಡ, ಪಿ.ಧನಜಂಯ, ಎನ್. ಪ್ರಕಾಶ್, ಪಿ.ಎಂ. ನಟರಾಜ್ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ರಾಘವ ಸ್ಮಾರಕ ಸಂಘದ ಕಾರ್ಯ ಶ್ಲಾಘನೀಯ

ಬಳ್ಳಾರಿ :

ನಾಟಕ ರಂಗದಲ್ಲಿ ತಮ್ಮದೇ ಆದ ವೈಶಿಷ್ಟ್ಯಮಯ ಪ್ರದರ್ಶನದ ಮೂಲಕ ಭಾರತೀಯ ಕಲಾಭಿರುಚಿಯನ್ನು ವಿಶ್ವಕ್ಕೇ ಮಾದರಿಯಾಗಿ ತೋರಿಸಿಕೊಟ್ಟ ನಾಟಕ ರಂಗ ಸಾರ್ವಭೌಮ ಬಳ್ಳಾರಿ ರಾಘವ ಅವರು ರಂಗಭೂಮಿಯ ಅನರ್ಘ್ಯ ರತ್ನ ಎಂದು ಅನಂತಪುರ ಆಕಾಶವಾಣಿ ಉನ್ನತ ಶ್ರೇಣಿಯ ವ್ಯಾಖ್ಯಾತ ಡಾ. ಶ್ಯಾಮಸುಂದರ ಶಾಸ್ತ್ರಿ ಬಣ್ಣಿಸಿದರು.

ನಗರದ ರಾಘವ ಕಲಾಮಂದಿರದಲ್ಲಿ ‘ರಾಘವ ಮೆಮೋರಿಯಲ್ ಅಸೋಯಷನ್ ವತಿಯಿಂದ ಆಯೋಜಿಸಿದ್ದ ಬಳ್ಳಾರಿ ರಾಘವ ಅವರ 146ನೇ ಜಯಂತಿ ಹಾಗೂ ಎರಡು ದಿನಗಳ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ನೂರಾರು ಜನರನ್ನು ರಂಗಭೂಮಿಗೆ ಪರಿಚಯಿಸಿದ ಹೆಗ್ಗಳಿಕೆ ರಾಘವ ಅವರದ್ದು. ಪಂಚಭಾಷೆಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದ ಅವರನ್ನು ವಿಶ್ವದ ಏಳು ಪ್ರಮುಖ ನಟರಲ್ಲಿ ಒಬ್ಬರೆಂದು ಖ್ಯಾತ ನಾಟಕಕಾರ ಜಾರ್ಜ್ ಬರ್ನಾರ್ಡ್ ಷಾ ಪ್ರಶಂಸಿದರು ಎಂದರು.
ಮಹಾತ್ಮ ಗಾಂಧೀಜಿ ಹಾಗೂ ರವೀಂದ್ರನಾಥ ಠ್ಯಾಗೋರ್ ಅವರ ಮೆಚ್ಚುಗೆಗೂ ಪಾತ್ರರಾಗಿದ್ದ ರಾಘವ ಅವರು, ಮಹಿಳಾ ಕಲಾವಿದರನ್ನೂ ಅಪಾರವಾಗಿ ಪ್ರೋತ್ಸಾಹಿಸಿದ್ದರು. ಅಲ್ಲದೆ, ರಾಘವ ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುತ್ತಾ, ಕಲಾವಿದರನ್ನು ಗೌರವಿಸುತ್ತಿರುವ ರಾಘವ ಸ್ಮಾರಕ ಸಂಘದ ಕಾರ್ಯ ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಸಿಕಿಂದ್ರಬಾದ್‌ನ ಶ್ರೀವಲ್ಲೂರು ಶ್ರೀಹರಿರಾವ್ ಅವರಿಗೆ ‘ಬಳ್ಳಾರಿ ರಾಘವ ರಾಜ್ಯ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಬಳಿಕ ಅನಂತಪುರದ ಲಲಿತ ಕಲಾ ಪರಿಷತ್ ತಂಡದಿಂದ ಶಕುನಿ ತೆಲುಗು ಪೌರಾಣಿಕ ನಾಟಕ ಪ್ರದರ್ಶಿಸಲಾಯಿತು.

===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net