ಪರಂಪರೆ ಬಗ್ಗೆ ಹೆಮ್ಮೆ ಇರಲಿ

ಬಳ್ಳಾರಿಯ ಪಾಂಚಜನ್ಯ ಸಭಾಂಗಣದಲ್ಲಿ  ಆಯೋಜಿಸಿದ್ದ ಪಂ.ದೀನ ದಯಾಳ ಉಪಾಧ್ಯಾಯರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಸಮಿತಿ ಸದಸ್ಯ ಗೋಪಿ ಮಾತನಾಡಿದರು. ನಿ.ಬ್ಯಾಂಕ್ ಅಧಿಕಾರಿ  ಬಿ.ಎಲ್.ವೆಂಕಟೇಶ, ಕಾರ್ಯದರ್ಶಿ ಮರ್ಚೇಡ್ ಮಲ್ಲಿಕಾರ್ಜುನಗೌಡ, ಜಿಲ್ಲಾ ಸಂಚಾಲಕ ಕೆ.ದಿಲೀಪ್ ಕುಮಾರ ಇದ್ದರು. ===

Published on

ಪ್ರಮುಖ ಮುಖ್ಯಾಂಶಗಳು

  • ಪರಂಪರೆ
ಬಳ್ಳಾರಿ : ಮಾತೃಭಾಷೆಯ ಅಭ್ಯುದಯವಾಗದೇ ಭಾರತದ ಸ್ವಾತಂತ್ರೃ ಮತ್ತು ಪ್ರಜಾಪ್ರಭುತ್ವ ಅಪೂರ್ಣವಾಗಿ ಉಳಿದು ಬಿಡುತ್ತವೆ ಎಂದು ಆರ್‌ಎಸ್‌ಎಸ್ ಸಂಘಟನೆಯ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಗೋಪಿ ಹೇಳಿದರು.
ನಗರದ ಪಾಂಚಜನ್ಯ ಸಭಾಂಗಣದಲ್ಲಿ ವಿದ್ಯಾರ್ಥಿ ಶಿಕ್ಷಣ ಸಂಸ್ಕೃತಿ ಸೇವಾ ಸಮಿತಿ ಹಾಗೂ ಎಬಿವಿಪಿ ಸಂಘಟನೆಯಿಂದ ಆಯೋಜಿಸಿದ್ದ ಪಂ.ದೀನ ದಯಾಳ ಉಪಾಧ್ಯಾಯರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾತೃಭಾಷೆಯ ಶಿಕ್ಷಣ ಮಾಧ್ಯಮವೇ ಇದಕ್ಕೆಲ್ಲಾ ಪರಿಹಾರ ಎಂಬ ಪಂ.ದೀನದಯಾಳರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದೆ ಎಂದರು. ಸ್ವ ಭಾಷಾ ಪ್ರೇಮ ಹಾಗೂ ಸ್ವದೇಶಿ ಪ್ರೇಮ ಎಲ್ಲರಲ್ಲೂ ಇರಬೇಕು. ನಮ್ಮ ಸಂಸ್ಕೃತಿ, ಪರಂಪರೆ, ಇತಿಹಾಸಗಳ ಬಗ್ಗೆ ಹೆಮ್ಮೆ ಇರಬೇಕು ಎಂದರು.
ನಿ.ಬ್ಯಾಂಕ್ ಅಧಿಕಾರಿ ಬಿ.ಎಲ್.ವೆಂಕಟೇಶ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು ಹಾಗೂ ಸಮಾಜಮುಖಿ ಜೀವನವನ್ನು ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.
===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net