ಪ್ರೌಢಶಾಲಾ ವಿಭಾಗದ ಬಿಆರ್‌ಪಿ ಎಸ್.ನಾಗರಾಜ್ ಮಾತನಾಡಿ, ಪಾಲಕರು ಮತ್ತು ಶಿಕ್ಷಕರು ಮಕ್ಕಳ ಕಲಿಕೆ ಬಂಡಿಯ ಎರಡು ಚಕ್ರಗಳಿದ್ದಂತೆ. ಎರಡೂ ಸಮನಾಗಿ ಚಲಿಸಿದರೆ ಮಾತ್ರ ಮಕ್ಕಳ ಶಿಕ್ಷಣ ಒಂದು ನೆಲೆ ಸೇರಲು ಸಾಧ್ಯ ಎಂದರು. ಸಿಆರ್‌ಪಿ ಸಿ.ಮೈಲಾರಿ ಮಾತನಾಡಿ, ಪಾಲಕರ ಸಭೆ ಮಕ್ಕಳ ಶೈಕ್ಷಣಿಕ ಪ್ರಗತಿ, ಶಿಸ್ತು, ಮತ್ತು ಸರ್ವತೋಮುಖ ಬೆಳವಣಿಗೆ ಕುರಿತು ಚರ್ಚಿಸಲು ಶಿಕ್ಷಕರು ಹಾಗೂ ಪಾಲಕರ ನಡುವೆ ಪ್ರಮುಖ ಕೊಂಡಿಯಾಗಿದೆ. ಶಾಲೆಯಲ್ಲಿ ಕಲಿಕೆಗೆ ಉತ್ತಮ ವಾತಾವರಣ ನಿರ್ಮಿಸಬೇಕಾದಲ್ಲಿ ಪಾಲಕರ ಪಾತ್ರ ಅತಿ ಮುಖ್ಯವಾಗಿದೆ ಎಂದರು. ಶಿಕ್ಷಕರಾದ ಜ್ಯೋತಿ, ದುರುಗೇಶ್, ಮಂಜುಳಾ, ರೇಣುಕಾ ಇತರರಿದ್ದರು.