ಬ್ಯಾಡ್ಮಿಂಟನ್ ಕೋರ್ಟ್ ಕಟ್ಟಡ ಬಳಿಯಲ್ಲಿಯೇ ಜಿಲ್ಲಾ ಈಜುಕೊಳವಿದೆ. ಆದರೆ, ಕಳೆದ ಕೆಲ ತಿಂಗಳ ಹಿಂದ ಸ್ವಚ್ಛಗೊಳಿಸಿಲ್ಲ. ಅಲ್ಲದೆ, ದುರ್ವಾಸನೆ ಬರುತ್ತಿರುವುದರಿಂದ ಕೆಲ ಈಜುಪಟುಗಳು ಖಾಸಗಿ ಈಜುಕೊಳದಲ್ಲಿ ನೂರರು ರೂ. ವ್ಯಯಿಸಿ ಈಜು ಕಲಿಯುವಂತ ಸ್ಥಿತಿಗೆ ತಲುಪಿದೆ. ಇನ್ನೂ ಚೆಸ್ ಹಾಗೂ ಕ್ಯಾರಮ್ ಬೋರ್ಡ್ ಕಟ್ಟಡವಿದ್ದು ಈವರೆಗೆ ನಗರದಲ್ಲಿ ಸರ್ಕಾರಿ ಒಳಾಂಗಣ ಕ್ರೀಡೆಗಳಿವೆ ಎಂಬ ಮಾಹಿತಿ ಸಾರ್ವಜನಿಕರಿಗಿಲ್ಲ. ನಗರದಲ್ಲಿ ಬ್ಯಾಡ್ಮಿಂಟನ್, ಈಜು, ಚೆಸ್, ಕ್ಯಾರಮ್ ಕ್ರೀಡೆಯ ತಾಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದ ಸ್ಪರ್ಧೆಗಳು ಆಯೋಜಿಸಿಲ್ಲ. ಆದ್ದರಿಂದ, ಯಾವ ಮಟ್ಟಿಗೆ ಜಿಲ್ಲಾ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಅಧಿಕಾರಿಗಳು ನಿರ್ಲಕ್ಷೃರಿದ್ದಾರೆ ಎಂಬುದು ತೋರುತ್ತಿದೆ.