32 ಪದವಿ ಪಡೆದಿದ್ದ ಬಾಬಾ ಸಾಹೇಬ್

ಸಂಡೂರಿನಲ್ಲಿ ಸಂವಿಧಾನ ದಿನದ ಕಾರ್ಯಕ್ರಮದಲ್ಲಿ ಶಾಸಕಿ ಅನ್ನಪೂರ್ಣ ತುಕಾರಾಮ್ ಅವರನ್ನು ಗೌರವಿಸಲಾಯಿತು.
ಸಂಡೂರಿನಲ್ಲಿ ಸಂವಿಧಾನ ದಿನದ ಕಾರ್ಯಕ್ರಮದಲ್ಲಿ ಶಾಸಕಿ ಅನ್ನಪೂರ್ಣ ತುಕಾರಾಮ್ ಅವರನ್ನು ಗೌರವಿಸಲಾಯಿತು.
Published on
ಸಂಡೂರು: ನಮ್ಮ ದೇಶದ ಸಂವಿಧಾನ 1949ರ ನ.26ರಂದು ರಚನೆಯಾಗಿ, 1950ರ ಜ.26ರಂದು ಜಾರಿಯಾಯಿತು ಎಂದು ಶಾಸಕಿ ಅನ್ನಪೂರ್ಣ ತುಕಾರಾಮ್ ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸಂವಿಧಾನ ದಿನದ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು. ಸಂವಿಧಾನ ರಚಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಜೀವನದುದ್ದಕ್ಕೂ ನೋವು, ಹಿಂಸೆ, ಅಪಮಾನಗಳನ್ನು ಅನುಭವಿಸಿದರು. ಅವರ ಸಹಾಯಕ ಕಾಫಿ ತಂದು ಕೈಗೆ ಕೊಡದೆ ಕೆಳಗಿಟ್ಟು ಅವಮಾನಿಸುತ್ತಾರೆ. ಇಂತಹ ಅನೇಕ ಅವಮಾನಗಳನ್ನು ಅಂಬೇಡ್ಕರ್ ಸಹಿಸಿಕೊಂಡಿದ್ದರು. ದೇಶದಲ್ಲಿಯೇ ಅತ್ಯಂತ ಹೆಚ್ಚು 32 ಪದವಿಗಳನ್ನು ಅಂಬೇಡ್ಕರ್ ಪಡೆದಿದ್ದರು ಎಂದರು.
ನಂದಿಹಳ್ಳಿ ಪಿಜಿ ಕೇಂದ್ರದ ಉಪನ್ಯಾಸಕ ತಳವಾರ್ ನರಸಿಂಹ, ಬಿಇಒ ಡಾ.ಐ.ಆರ್.ಅಕ್ಕಿ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಎಡಿ ಎನ್.ಕೆ.ವೆಂಕಟೇಶ್, ಕುರೇಕುಪ್ಪ ಪುರಸಭೆ ಅಧ್ಯಕ್ಷ ಕೆ.ಕಲ್ಗುಡೆಪ್ಪ, ಶಿರಸ್ತೇದಾರ್ ಕೆ.ಎಂ.ಶಿವಕುಮಾರ್, ಕಸಾಪ ತಾಲೂಕು ಘಟಕದ ಮಾಜಿ ಅಧ್ಯಕ್ಷ ಬಸವರಾಜ ಮಸೂತಿ, ತಾಪಂ ಇಒ ಮಡಗಿನ ಬಸಪ್ಪ, ಬಿಇಒ ಡಾ.ಐ.ಆರ್.ಅಕ್ಕಿ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಎಡಿ ಎನ್.ಕೆ.ವೆಂಕಟೇಶ್, ಉಪನ್ಯಾಸಕ ತಳವಾರ್ ನರಸಿಂಹ, ತಾಸನೌಸಂಘದ ಅಧ್ಯಕ್ಷ ಸಿದ್ದಣ್ಣ ಯಳವಾರ್, ಆದಿ ಜಾಂಭವ ಸಂಘದ ತಾಲೂಕು ಅಧ್ಯಕ್ಷ ನಿಂಗಪ್ಪ ಐಹೊಳೆ, ಪ್ರಮುಖರಾದ ತಾಯಪ್ಪ, ದೇವದಾಸ್, ವೈಟಿಜಿ ಮಲಿಯಪ್ಪ, ಸತೀಶ್, ಪುರಸಭೆ ಮುಖ್ಯಾದಿಕಾರಿ ವಿನಯ ಕುಮಾರಗೌಡ, ವಲಯ ಅರಣ್ಯಾಧಿಕಾರಿಗಳಾದ ಸೈಯದ್ ದಾದಾ ಖಲಂದರ್, ಮಂಜುನಾಥ, ಎಸ್ಟಿ ಕಲ್ಯಾಣಾಧಿಕಾರಿ ರಂಗನಾಥ, ತೋಟಗಾರಿಕೆ ಇಲಾಖೆ ಎಡಿ ಹನುಮಪ್ಪ ನಾಯಕ, ಮೀನುಗಾರಿಕೆ ಇಲಾಖೆ ಮಂಜುನಾಥ ಇದ್ದರು.
ತಾಲೂಕು ಕಚೇರಿಯಿಂದ ವಿರಕ್ತಮಠ ಮಾರ್ಗವಾಗಿ ಅಂಬೇಡ್ಕರ್ ಭವನದವರೆಗೆ ಮೆರವಣಿಗೆ ನಡೆಯಿತು. ಬೆಳ್ಳಿ ರಥದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆ ನಡೆಯಿತು. ಶಾಲಾ ಮಕ್ಕಳಿಗೆ ಬಹುಮಾನಗಳನ್ನು ಶಾಸಕಿ ಅನ್ನಪೂರ್ಣ ತುಕಾರಾಮ್ ವಿತರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net